ಮಾದರಿ ನೀತಿ ಸಂಹಿತೆ(ಎಂಸಿಸಿ) ಘೋಷಣೆಯಾದ ನಂತರ ಚುನಾವಣಾ ಆಯೋಗವು ಕರ್ನಾಟಕದಲ್ಲಿ ನೀರಿನ ಟ್ಯಾಂಕರ್ ಗಳ ಚಲನವಲನಗಳ ಮೇಲೆ ತೀವ್ರ ನಿಗಾ ಇಡಲಿದೆ ಎಂದು ವರದಿ ಮಾಡಿದೆ.
ಬೆಂಗಳೂರಿನಲ್ಲಿ ನೀರು ಸರಬರಾಜಿನಲ್ಲಿ ತೀವ್ರ ಕೊರತೆಯ ಮಧ್ಯೆ ಬೆಂಗಳೂರಿನಲ್ಲಿ ನೀರಿನ ಟ್ಯಾಂಕರ್ ಗಳ ಬೆಲೆಯನ್ನು ರಾಜ್ಯ ಸರ್ಕಾರ ಈಗಾಗಲೇ ನಿಯಂತ್ರಿಸಿದೆ. ಈ ನಡುವೆ ಲೋಕಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ನೀರಿನ ಟ್ಯಾಂಕರ್ ಗಳ ಮೇಲೆ ಕರ್ನಾಟಕ ಚುನಾವಣಾ ಆಯೋಗ ನಿಗಾ ಇಟ್ಟಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸ್ವಯಂ ನೋಂದಣಿಯಾಗಿರುವ ಟ್ಯಾಂಕರ್ ಗಳಿಗೆ ಕಡ್ಡಾಯವಾಗಿ ಸ್ಟಿಕ್ಕರ್ ಗಳನ್ನು ಅಂಟಿಸಿಕೊಳ್ಳಬೇಕಿದೆ. ಜಲಮಂಡಳಿ ವತಿಯಿಂದ ಸ್ಟಿಕ್ಕರ್ ಸಿದ್ದಪಡಿಸಿ ಪಾಲಿಕೆಗೆ ನೀಡಿದೆ. ಪ್ರತಿ ಟ್ಯಾಂಕರ್ ಮಾಲೀಕರು ನೋಂದಣಿ ಪ್ರಮಾಣ ಪತ್ರ, ಸ್ಟಿಕರ್ ನಲ್ಲಿ ವಾಹನದ ಸಂಖ್ಯೆ, ಮಾಲೀಕರ ಹೆಸರು, ದೂರುವಾಣಿ ಸಂಖ್ಯೆ ಹಾಗೂ ಸ್ವಂ ನೋಂದಣಿಯಾಗಿರುವ ಸಂಖ್ಯೆಯನ್ನು ಹಾಗೂ ವಲಯದ ಹೆಸರು ನಮೂದಿಸಿ ವಾಹನದ ಮೇಲೆ ಕಡ್ಡಾಯವಾಗಿ ಅಂಟಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಜರಿಸಲಾಗುವುದು ಎಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


