ದೊಡ್ಡ ಹೊಟ್ಟೆಯನ್ನು ಕರಗಿಸುತ್ತೆ ಈ ಎರಡು ಎಲೆಗಳು:
ತುಳಸಿ ಎಲೆಗಳ ಸೇವನೆಯು ಹೊಟ್ಟೆಗೆ ಪ್ರಯೋಜನಕಾರಿಯಾಗಿದೆ. ಇದನ್ನು ತಿನ್ನುವುದರಿಂದ ಜೀರ್ಣಾಂಗವು ಆರೋಗ್ಯವಾಗಿರುತ್ತದೆ. ತುಳಸಿಯು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 3 ರಿಂದ 4 ತುಳಸಿ ಎಲೆಗಳನ್ನು ತಿನ್ನಿ. ಕರಿಬೇವಿನ ಎಲೆಗಳಲ್ಲಿರುವ ಅಂಶಗಳು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಣ್ಣಿನ ಊತ ಕಾಣಿಸಿಕೊಂಡರೆ ಇದನ್ನೊಮ್ಮೆ ಟ್ರೈ ಮಾಡಿ:
ಮಾಲಿನ್ಯ ಅಥವಾ ಧೂಳಿನ ಅಲರ್ಜಿಯಿಂದ ಕಣ್ಣಿನ ಅಡಿಯಲ್ಲಿ ಊತ ಕಾಣಿಸಿಕೊಳ್ಳುವುದಿದೆ. ನಿದ್ರಾಹೀನತೆ ಅಥವಾ ಸರಿಯಾಗಿ ನಿದ್ರೆ ಮಾಡದಿರುವುದು ಕೂಡ ಕಣ್ಣಿನ ಕೆಳ ಭಾಗದ ಊತಕ್ಕೆ ಕಾರಣವಾಗಿರುತ್ತದೆ. ಇದರ ಊತ ತಡೆಯಲು ಉಪ್ಪನ್ನು ಮಿತವಾಗಿ ಬಳಸಿ, ಅನಗತ್ಯ ಮೇಕಪ್ ಮಾಡುವುದನ್ನು ನಿಲ್ಲಿಸಿ, ಇದರ ಜೊತೆಗೆ ದಿನಕ್ಕೆ ಕನಿಷ್ಠ 20 ರಿಂದ 30 ಬಾರಿ ಕಣ್ಣುಗಳ ಮೇಲೆ ನೀರು ಚಿಮುಕಿಸಬೇಕು. ಇದರಿಂದ ಕಣ್ಣುಗಳು ಸ್ವಚ್ಛವಾಗಿರುತ್ತವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296