ದೊಡ್ಡಬಳ್ಳಾಪುರ: ತಾಲೂಕು ಕಾಡನೂರು ಗ್ರಾಮದ ಅಬ್ದುಲ್ ಗಫರ್ ಶರೀಫ್ ಎಂಬುವವರ ಜಮೀನಿನಲ್ಲಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮರದ ತುಂಡುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮರದ ತುಂಡುಗಳು ಸುಟ್ಟು ಭಸ್ಮವಾಗಿದ್ದು, ಇದರ ಪಕ್ಕದಲ್ಲಿ ಇದ್ದ ಹುಣಸೆಹಣ್ಣಿನ ರಾಶಿ ಕೂಡ ಉರಿದು ಭಸ್ಮವಾಗಿದ್ದು, ತುಂಬು ಫಸಲಿನಿಂದ ಮೈತುಂಬಿದ್ದ ಹುಣಸೆ ಮರವು ಕೂಡ ಸುಟ್ಟು ಹಾಳಾಗಿದೆ.





ಈ ಬಗ್ಗೆ ಅಬ್ದುಲ್ ಗಫರ್ ಶರೀಫ್ ಮಾಧ್ಯಮದೊಂದಿಗೆ ಮಾತನಾಡಿ, ನಾನು ಅನೇಕ ಕಾಯಿಲೆಗಳಿಂದ ಅನಾರೋಗ್ಯಪೀಡಿತನಾಗಿದ್ದು, ಎದ್ದು ಓಡಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದೇನೆ. ಇದನ್ನು ಕಂಡ ಕಿಡಿಗೇಡಿಗಳು ಈ ರೀತಿಯ ಹೀನ ಕೃತ್ಯ ಮಾಡಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಧ್ಯಮದ ಮೂಲಕ ಮನವಿ ಮಾಡುತ್ತೇನೆ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಪರಿಹಾರ ನೀಡುವಂತೆ ಮನವಿ ಮಾಡಿದರು.

ಅನಾರೋಗ್ಯ ಪೀಡಿತರಾಗಿ ಯಾವುದೇ ರೀತಿಯ ಸಹಕಾರವಿಲ್ಲದ ಅಮಾಯಕರಾದ ಇಂಥ ರೈತರಿಗೆ ಸರ್ಕಾರ ಯಾವ ರೀತಿ ಸಹಕಾರ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth


