ಕನ್ನಡ ಚಿತ್ರರಂಗದಲ್ಲಿ ಕೇವಲ ನಟನಾಗಿ ಮಾತ್ರವಲ್ಲದೇ, ಅತ್ಯುತ್ತಮ ಮಾದರಿ ವ್ಯಕ್ತಿತ್ವದಿಂದಲೂ ಜನರ ಮನಸ್ಸಿನಲ್ಲಿ ಉಳಿದುಕೊಂಡವರು ಪುನೀತ್ ರಾಜಕುಮಾರ್ ಅವರು. ತಮ್ಮದೇ ಪ್ರೊಡಕ್ಷನ್ ಹೌಸ್ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಎಷ್ಟೋ ಜನರ ಜೀವನಕ್ಕೆ ದಾರಿ ದೀಪವಾಗಿದ್ದಾರೆ ನಮ್ಮ ಅಪ್ಪು. ನಟನೆಯೊಂದಿಗೆ ಅನೇಕ ಕಾರ್ಯಕ್ರಮಗಳ ನಿರೂಪಣೆ, ಗಾಯಕನಾಗಿ ಅಪ್ಪು ಎಲ್ಲರನ್ನು ಸೆಳೆಯುವಲ್ಲಿ ಯಶಸ್ವಿಯಾದವರು. ಕನ್ನಡಿಗರ ಎದೆಯಲ್ಲಿ ಎಂದೆಂದಿಗೂ ಜೀವಂತವಾಗಿರುವ ಅಪ್ಪು, ದೊಡ್ಮನೆ ರಾಜಕುಮಾರ ನಮ್ಮೊಡನಿಲ್ಲ ಅಂತ ಅಭಿಮಾನಿಗಳು ಅಂದುಕೊಂಡೇ ಇಲ್ಲ..!
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಷ್ಟೋ ಯುವಜನತೆಗೆ ಸ್ಪೂರ್ತಿ. ಬದುಕಿದರೆ ಅಪ್ಪು ಅವರಂತೆ ಬದುಕಬೇಕು ಎನ್ನುತ್ತಾರೆ ಕನ್ನಡಿಗರು. ಇದೀಗ ಡಾ. ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸೀಸನ್ 10 ಸ್ಪರ್ಧಿ ವಿನಯ್ ಗೌಡ ಅವರು ಅಂಧ ಮಗುವನ್ನ ದತ್ತು ಪಡೆದುಕೊಂಡಿದ್ದಾರೆ. ಅಪ್ಪು ಬರ್ತ್ ಡೇ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಅವರು ಶೇಷಾದ್ರಿಪುರಂನ ಒಂದನೇ ಮುಖ್ಯರಸ್ತೆಯಲ್ಲಿರುವ ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಸ್ಥೆಗೆ ಭೇಟಿ ನೀಡಿದ್ದರು.
ಕ್ಷೇಮಾಭ್ಯುದಯ ಸಂಸ್ಥೆಯಲ್ಲಿರುವ 32 ಅಂಧ ಮಕ್ಕಳಿಗೂ ವಿನಯ್ ಗೌಡ ಅವರ ಫ್ಯಾಮಿಲಿ ಅಪ್ಪು ಹುಟ್ಟು ಹಬ್ಬದಂದು ಬ್ರೇಕ್ ಫಾಸ್ಟ್ ಆಯೋಜಿಸಿತ್ತು. ವಿನಯ್ ದಂಪತಿ ಅಂಧ ಮಕ್ಕಳಿಗೆ ಖುದ್ದು ತಿಂಡಿ ಬಡಿಸಿ ಬಳಿಕ ಅಂಧ ಮಕ್ಕಳ ಜೊತೆ ಕೂತು ಬ್ರೇಕ್ ಫಾಸ್ಟ್ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


