ಭಾರತೀಯ ಹವಾಮಾನ ಇಲಾಖೆಯು ಮುಂಬರುವ ಕೆಲವು ದಿನಗಳಲ್ಲಿ ಗುಡುಗು, ಮಿಂಚು ಮತ್ತು ಆಲಿಕಲ್ಲು ಸಹಿತ ಸಾಧಾರಣ ಮಳೆಯಾಗುವ ಕುರಿತು ಮುನ್ಸೂಚನೆಯನ್ನು ನೀಡಿದೆ. ಮಾರ್ಚ್ 22 ರಿಂದ ಮಾರ್ಚ್ 24 ರವರೆಗೆ ಪಶ್ಚಿಮ ಹಿಮಾಲಯದಲ್ಲಿ ವಿರಳವಾದ ಲಘು ಮಳೆ, ಹಿಮಪಾತ ಆಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಜಮ್ಮು ಕಾಶ್ಮೀತ, ಲಡಾಖ್, ಗಿಲ್ಗಿಟ್ ಬಾಲ್ಚಿಸ್ತಾನ್, ಮುಜಫರಾಬಾದ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಲಘು ಮಳೆ ಅಥವ ಹಿಮಪಾತದ ಲಕ್ಷಣವಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ನಾಳೆ (ಮಾರ್ಚ್ 23) ಅರುಣಾಚಲ ಪ್ರದೇಶದಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಂಭವದ ಜೊತೆಗೆ ಹಿಮಪಾತವಾಗುವ ಮುನ್ಸೂಚನೆ ಇದೆ. ಮಾ.22, 24 ರಂದು ಪಂಜಾಬ್ ನಲ್ಲಿ, ಮಾ.24 ರಂದು ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಮೇಲೆ ಚದುರಿದ ಮಳೆ ಬೀಳಲಿದೆ.
ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಉಪ ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಂತಹ ಈಶಾನ್ಯ ಮತ್ತು ಪೂರ್ವ ಭಾರತದ ರಾಜ್ಯಗಳಲ್ಲಿ ಗುಡುಗು ಮತ್ತು ಮಿಂಚಿನ ಮಳೆಯಾಗಲಿರುವುದಾಗಿ ವರದಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


