ಸರಗೂರು: ತಾಲ್ಲೂಕಿನ ಹೆಗ್ಗನೂರು ಗ್ರಾಪಂ ವ್ಯಾಪ್ತಿಯ ಕಾಟವಾಳು ಗ್ರಾಮದಲ್ಲಿ, ಗ್ರಾಮ ದೇವತೆ ಶ್ರೀಹುಲಿ ಮಾಸ್ತಮ್ಮ ದೇವಿ ಜಾತ್ರಾ ಕೊಂಡ ಮತ್ತು ರಥೋತ್ಸವ ಮಂಗಳವಾರದಿಂದ ಆರಂಭವಾಗಿ ಗುರುವಾರದವರೆಗೆ ವಿಜೃಂಭಣೆಯಿಂದ ಜರುಗಿತು.
ಮಾಸ್ತಮ್ಮ ದೇವಸ್ಥಾನದಲ್ಲಿ ಬೆಳ್ಳಿಗೆಯಿಂದ ಧಾರ್ಮಿಕ ಕಾರ್ಯ ಮಾಡಲಾಯಿತು. ನಂತರ ಗಂಗೆಗೆ ಪೂಜೆ ಸಲ್ಲಿಸಿದರು. ನಂತರ ಅದೇ ಮಾರ್ಗವಾಗಿ ಬೀದಿಗಳಲ್ಲಿ ಹುಲಿ ಮಾಸ್ತಮ್ಮ ರಥವನ್ನು ಎಳೆಯುವ ಮೂಲಕ ಮೆರವಣಿಯಲ್ಲಿ ದೇವಸ್ಥಾನವನ್ನು ತಲುಪಿದರು. ನಂದಿಕಂಬ ಕುಳಿತ, ಮಂಗಳವಾದ್ಯ, ಕೆರಳ ತಮಟೆಯನ್ನೊಳಗೊಂಡ ಕಲಾತಂಡಗಳು ಮೆರವಣಿಗೆಯನ್ನು ಮತ್ತಷ್ಟು ಮೆರುಗುಗೊಳಿಸಿತು..

ಕೊಂಡೋತ್ಸವ: ಮಾಸ್ತಮ್ಮನ ದೇವಿಯ ದೇವಾಲಯದ ಮುಂಭಾಗದಲ್ಲಿ ಗ್ರಾಮಸ್ಥರು ಕೊಂಡೋತ್ಸವ ಸಿದ್ಧಪಡಿಸಿದ್ದರು. ನಂತರ ಉತ್ಸವ ಮೂರ್ತಿಯನ್ನು ದೇವಾಲಯ ಮುಂಭಾಗದ ತಂದು ವಿವಿಧ ಪೂಜೆ, ಪುನಸ್ಕಾರ ನೆರವೇರಿಸಿದ ಬಳಿಕ ಕೊಂಡೋತ್ಸವಕ್ಕೆ ಅನುವು ಮಾಡಿಕೊಡಲಾಯಿತು. ಈ ವೇಳೆ ನೂರಾರು ಭಕ್ತರು ಕೊಂಡ ಆಯ್ದರು. ನಂತರ ಭಕ್ತರು ಕೊಂಡಕ್ಕೆ ಉಪ್ಪು ಹಾಗೂ ಅರಳು ಸುರಿಯುವ ಮೂಲಕ ತಮ್ಮ ಇಷ್ಟಾರ್ಥ ಹರಕೆ ಸಲ್ಲಿಸಿದರು.
ಸಾಕ್ಷಿಯಾದ ಸಾವಿರಾರು ಭಕ್ತರು: ಅಕ್ಕಪಕ್ಕದ ಹಾಗೂ ಗ್ರಾಮದ ಗ್ರಾಮಸ್ಥರು ಎಲ್ಲ ಜಾತಿ-ಜನಾಂಗದವರು ಒಗ್ಗೂಡಿ ನಡೆಸುವ ಜಾತ್ರೆಗೆ ಸರಗೂರು ಭಾಗದ ಅಕ್ಕ ಪಕ್ಕದ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ದೇವಿಯ ದರ್ಶನ ಪಡೆದು ಪ್ರಾರ್ಥಿಸಿದರು.
ಮೂರು ದಿನಗಳ ಕಾಲ ಪೌರಾಣಿಕ ನಾಟಕ ಮತ್ತು ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗ್ರಾಮಸ್ಥರ ವತಿಯಿಂದ ಅನ್ನ ಸಂತರ್ಪಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಕೆ.ಎಸ್. ವೀರಭದ್ರಪ್ಪ, ರಾಜಪ್ಪ, ಬಸಪ್ಪ, ಶಿವರುದ್ರಪ್ಪ, ಗುರುಸ್ವಾಮಿ, ಗ್ರಾಪಂ ಸದಸ್ಯ ಮುತ್ತುರಾಜ್,ಮಲ್ಲಪ್ಪ, ಪರಶಿವಮೂರ್ತಿ , ಗುರುಸ್ವಾಮಿ, ಹಾಜರಿದ್ದರು..
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


