ಅಫಜಲಪುರ(ಕಲಬುರಗಿ): ದ್ವಿತೀಯ ಪಿಯು ಪರೀಕ್ಷೆಯಲ್ಲಿ ನಕಲು ಮಾಡಲು ಸಹಕಾರ ನೀಡಿಲ್ಲ ಎಂದು ಕರ್ತವ್ಯನಿರತ ಪೊಲೀಸ್ ಹೆಡ್ ಕಾನ್ಸ್‌ಟೆಬಲ್ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ.
ತಾಲೂಕಿನ ಕರಜಗಿ ಪರೀಕ್ಷಾ ಕೇಂದ್ರದಲ್ಲಿ ಮಾರ್ಚ್ 20ರಂದು ಈ ಘಟನೆ ನಡೆದಿದೆ. ಪರೀಕ್ಷಾ ಕೇಂದ್ರದ ಬಳಿ ಹೆಡ್ ಕಾನ್ಸ್‌ಟೇಬಲ್ ಪಂಡಿತ್ ಪಾಂಡ್ರೆ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಕೈಲಾಸ ಸಕ್ಕರಗಿ ಎಂಬಾತ ಪದೇಪದೆ ಪೊಲೀಸ್ ಸಿಬ್ಬಂದಿ ಬಳಿ ತೆರಳಿ “ನನ್ನ ತಂಗಿ ಪರೀಕ್ಷೆಗೆ ಕುಳಿತಿದ್ದಾಳೆ. ಹೀಗಾಗಿ ನನಗೆ ಒಳಗಡೆ ಹೋಗಲು ಬಿಡಿ,” ಎಂದು ಕಿರಿಕಿರಿ ಮಾಡಿದ್ದಾನೆ. ”ನೀ ಏನು ದೊಡ್ಡನೌಕರಿ ಮಾಡುತ್ತಿದ್ವಿ, ನಮಗೆ ಒಳಗಡೆ ಹೋಗಲು ಬಿಡು, ಇಲ್ಲ ಅಂದ್ರೆ ನಿನಗೆ ಬೇರೆ ಮಾಡಬೇಕಾಗುತ್ತದೆ ನೋಡು,” ಎಂದು ಧಮ್ಕಿ ಹಾಕಿದ್ದಾನೆ.
ಪರೀಕ್ಷಾ ಕೇಂದ್ರದ ಒಳಕ್ಕೆ ನುಗ್ಗಲು ಯತ್ನಿಸಿದ್ದರಿಂದ ಆತನನ್ನು ಪಾಂಡ್ರೆ ತಡೆದರು. ಈ ವೇಳೆ ಕೈಲಾಸ ಸಕ್ಕರಗಿ ಹಾಗೂ ಸಮೀರ ನಡುವಿನಕೇರಿ, ಪಾಂಡ್ರೆ ಅವರಲ್ಲಿದ್ದ ಲಾಠಿಯನ್ನು ಕಸಿದುಕೊಂಡು ಹಲ್ಲೆ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


