ಎಚ್ ಡಿ ಕೋಟೆ: ಅಂಗನವಾಡಿಯ ನೀರಿನ ಸಂಪ್ ಗೆ ಬಿದ್ದು ಬಾಲಕಿ ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆಯ ಬಂಗ್ಲಿಹುಂಡಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯನ್ನುಅಂತರ ಸಂತೆಯ ಬಂಗ್ಲಿ ಹುಂಡಿ ನಿವಾಸಿ ಸ್ವಾಮಿ ಮತ್ತು ಅಂಜು ದಂಪತಿಗಳ ಪುತ್ರಿ ಸನ್ನಿಧಿ (3) ಎಂದು ಗುರುತಿಸಲಾಗಿದೆ.
ಅಂಗನವಾಡಿಗೆ ತೆರಳಿದ ಬಾಲಕಿ ಕತ್ತಲಾದರೂ ಮನೆಗೆ ಹಿಂದುರುಗಿ ಬಾರದ ಕಾರಣ ಗಾಬರಿಗೊಂಡ ಪೋಷಕರು ಬಾಲಕಿಗಾಗಿ ಹುಡುಕಾಟ ನಡೆಸಿದ ವೇಳೆ ಅಂಗನವಾಡಿಯ ಸಂಪ್ ನಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಆದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಬಾಲಕಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಗೆ ಅಂಗನವಾಡಿಯ ಸಿಬ್ಬಂದಿಯು ಸಂಪ್ ನ ಬಾಗಿಲನ್ನು ಬೇಜವಾಬ್ದಾರಿತನದಿಂದ ಮುಚ್ಚದೆ ತೆರೆದುಬಿಟ್ಟಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಅಂಗನವಾಡಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿ ಶಿಕ್ಷಕಿ ಗೀತಾ, ಸಹಾಯಕಿ ನಾಗಮ್ಮ, ಮೇಲ್ವಿಚಾರಕಿ ಚಿನ್ನಮ್ಮ, CDPO, ಆಶಾರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.
ಸರ್ಕಾರಿ ಕಟ್ಟಡದಲ್ಲಿರುವ ನೀರನ್ನು ದೇವಸ್ಥಾನ ಕಟ್ಟಲು ಯಾರ ಅನುಮತಿ ಪಡೆಯದೇ ಸಿಬ್ಬಂದಿಗಳು ನೀಡಿದ್ದೆ ಮಗುವಿನ ಸಾವಿಗೆ ಕಾರಣವಾಯಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಾತ್ರವಲ್ಲದೆ ಬಾಲಕಿಯ ಸಾವಿನ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿ ಆಶಾ ಹಗುರವಾಗಿ ಮಾತನಾಡಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರದಿ: ಮಲಾರ ಮಹದೇವ ಸ್ವಾಮಿ