ಬೆಂಗಳೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಪ್ರಸ್ತುತ ಲೋಕಸಭಾ ಚುನಾವಣೆಗೆ ಇಲ್ಲಿಯವರೆಗೆ ಒಟ್ಟು 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು. ಈ ಹಿಂದೆ ದಿನಾಂಕ 15-03-2024, 19-03-2024, 23-03-2024 ರಂದು ಮೊದಲ, ಎರಡನೇ ಮತ್ತು ಮೂರನೇ ಪಟ್ಟಿಯಲ್ಲಿ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಈಗಾಗಲೇ ಘೋಷಣೆ ಮಾಡಲಾಗಿತ್ತು.
ಇಂದು ಚಿಕ್ಕೋಡಿ ಹಾಗೂ ಬಳ್ಳಾರಿ ಕ್ಷೇತ್ರಗಳಿಗೆ ಘೋಷಣೆ ಮಾಡಲಾಗಿದೆ. KRS ಪಕ್ಷವು ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದು, ಈ ನಿಟ್ಟಿನಲ್ಲಿ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಂದುವರೆದಿದ್ದು ಆ ಕ್ಷೇತ್ರಗಳಿಗೆ ಶೀಘ್ರದಲ್ಲಿಯೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ.
ಇಂದು ನಡೆದ ಪತ್ರಿಕಾಘೋಷ್ಠಿಯ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿಯವರು ಅಭ್ಯರ್ಥಿಗಳನ್ನು ಮಾದ್ಯಮಗಳ ಮೂಲಕ ನಾಡಿನ ಜನತೆಗೆ ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಪಕ್ಷದ ಧ್ಯೇಯ, ತತ್ವ-ಸಿದ್ದಾಂತಗಳಿಗೆ ಹಾಗು ಪ್ರಾಮಾಣಿಕವಾಗಿ ಚುನಾವಣಾ ಪ್ರಚಾರ ಮಾಡುವ ಬಗ್ಗೆ ವಾಗ್ದಾನ ಮತ್ತು ಪ್ರತಿಜ್ಞೆ ಮಾಡಿಸಲಾಯಿತು.
ಅಭ್ಯರ್ಥಿಗಳ ಪಟ್ಟಿ:
- ಚಿಕ್ಕೋಡಿ — ಕುಮಾರ್ ಸಂಭಾಜಿ ಡೋಂಗರೆ
- ಬೆಳಗಾವಿ -– ಬಿ. ಜಿ. ಕುಂಬಾರ,
- ಧಾರವಾಡ — ನಾಗರಾಜ್ ಕರೆಣ್ಣವರ,
- ಗುಲ್ಬರ್ಗ – ವಿಜಯ್ ಜಾಧವ್,
- ದಾವಣಗೆರೆ — ರುದ್ರೇಶ್ ಕೆ. ಎಚ್.
- ಬೆಂಗಳೂರು ದಕ್ಷಿಣ — ರಘುಪತಿ ಭಟ್
- ಮೈಸೂರು – ಕೊಡಗು — ಮಾ. ಸ. ಪ್ರವೀಣ್
- ಶಿವಮೊಗ್ಗ — ಎಸ್. ಕೆ. ಪ್ರಭು
- ಬೀದರ್ — ರಮೇಶ್ ಚಾವ್ಹಾಣ್
- ಕೊಪ್ಪಳ — ನಿರುಪಾದಿ ಗೋಮರ್ಸಿ
- ಬಿಜಾಪುರ — ಗಣಪತಿ ಲಾ. ರಾಠೋಡ್
- ಬಳ್ಳಾರಿ — ಚನ್ನವೀರ ಚಿತ್ತಾರ
- ಚಿತ್ರದುರ್ಗ — ಬಿ. ವೆಂಕಟೇಶ್
- ಚಾಮರಾಜನಗರ — ಕಂದಹಳ್ಳಿ ಮಹೇಶ್
- ಕೋಲಾರ — ಮಹೇಶ್ ಎ. ವಿ.
- ಬೆಂಗಳೂರು ಕೇಂದ್ರ — ಪ್ರಕಾಶ್ ಕೆ.
- ಬೆಂಗಳೂರು ಉತ್ತರ — ಶಿವಕುಮಾರ್ ಬಿ.
- ತುಮಕೂರು — ಪ್ರದೀಪ್ ಕುಮಾರ್ ದೊಡ್ಡಮುದ್ದೇಗೌಡ
- ಬೆಂಗಳೂರು ಗ್ರಾಮಾಂತರ — ಮಹಮ್ಮದ್ ಮುಸಾದಿಕ್ ಪಾಷ
- ಚಿಕ್ಕಬಳ್ಳಾಪುರ — ಡಾ. ಆಂಜನಪ್ಪ ಟಿ. ಹೆಚ್.
- ಹಾಸನ — ದೇವರಾಜಾಚಾರಿ ಎಂ.
- ದಕ್ಷಿಣ ಕನ್ನಡ — ರಂಜನಿ ಎಂ.
- ಮಂಡ್ಯ — ಕೆ. ಆರ್. ಚಂದ್ರಶೇಖರ್ (ಚಂದ್ರು ಕೀಲಾರ)
ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷವು ಹಲವಾರು ಮಾನದಂಡಗಳನ್ನು ನಿಗದಿಪಡಿಸಿ ಹಾಗೂ ಸರ್ವರಿಗೂ ಅನ್ವಯವಾಗುವಂತೆ ಆಯ್ಕೆ ಪ್ರಕ್ರಿಯೆಯನ್ನು ರೂಪಿಸಲಾಗಿದೆ. ಈ ಆಯ್ಕೆ ಪ್ರಕ್ರಿಯೆಯ ಭಾಗವಾಗಿ, ಆಕಾಂಕ್ಷಿಗಳು ರಾಜ್ಯ ಸಮಿತಿಯ ಐದು ಜನರ ಸಂದರ್ಶನ ಪ್ಯಾನಲ್ ಮುಂದೆ ಸಂದರ್ಶನ ನೀಡಬೇಕಾಗಿದೆ. ಉಳಿದ ಲೋಕಸಭಾ ಕ್ಷೇತ್ರಗಳಿಗೆ ಆಯ್ಕೆ ಪ್ರಕ್ರಿಯೆ ಮುಂದುವರೆದಿದ್ದು, ಶೀಘ್ರದಲ್ಲಿ ಅಂತಿಮಗೊಳಿಸಲಾಗುವುದು. ಇದರಲ್ಲಿ ಹಲವಾರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮ ಹಂತದಲ್ಲಿದ್ದು, ಇನ್ನು ಕೆಲವು ಕ್ಷೇತ್ರಗಳಿಗೆ ಆಯ್ಕೆ ಪ್ರಕ್ರಿಯೆ ಮುಂದುವರೆದಿದೆ. ಕೆ. ಆರ್. ಎಸ್. ಪಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಯಸುವ ಆಸಕ್ತರು 83107 77040 ಫೋನ್ ಸಂಖ್ಯೆಯನ್ನು ಸಂಪರ್ಕಿಸಬೇಕೆಂದು ಕೋರಿದೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯದ ಹಿತಾಸಕ್ತಿಗಾಗಿ, ಭ್ರಷ್ಟಾಚಾರದ ವಿರುದ್ಧ, ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು, ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ನೆಲೆಗೊಳಿಸುವ ನಿಟ್ಟಿನಲ್ಲಿ ಮತ್ತು ನಾಯಕತ್ವವನ್ನು ಬೆಳೆಸುವ ಕಾರ್ಯದಲ್ಲಿ ನಿರಂತರವಾಗಿ ಕಾರ್ಯಪ್ರವೃತ್ತವಾಗಿದೆ. ಈ ವಿಚಾರಗಳ ಬಗ್ಗೆ ಆಸಕ್ತಿ ಇರುವವರು ಕೆ.ಆರ್.ಎಸ್. ಪಕ್ಷವನ್ನು ಬೆಂಬಲಿಸಬೇಕು ಮತ್ತು ಪಕ್ಷವನ್ನು ಸೇರಬೇಕು ಎಂದು ಈ ಮೂಲಕ ಕರೆ ನೀಡಲಾಗುತ್ತಿದೆ ಎಂದು ಮುಖಂಡರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


