ಸ್ಯಾಂಡಲ್ ವುಡ್ ನ ಬ್ಯೂಟಿ ಕ್ವೀನ್ ರಮ್ಯಾ ಅವರು ರಾಜಕೀಯದ ಕಾರಣಕ್ಕೆ ಸಡನ್ ಆಗಿ ನಟನೆಯಿಂದ ದೂರಾಗಿದ್ದರು. ಆದರೆ ಹಲವು ಸಮಯಗಳ ನಂತರ ‘ಉತ್ತರಕಾಂಡ’ ಸಿನಿಮಾವನ್ನು ಅವರು ಒಪ್ಪಿಕೊಂಡಾಗ ಜನರು ತುಂಬಾ ಉತ್ಸುಕರಾಗಿದ್ದರು. ಆದರೆ ಈಗ ರಮ್ಯಾ ಅವರು ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ‘ಉತ್ತರಕಾಂಡ’ ಸಿನಿಮಾದಿಂದ ಹೊರಬಂದಿರುವುದಾಗಿ ಅವರು ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಅವರು ಆ್ಯಕ್ಟೀವ್ ಆಗಿದ್ದು, ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಅವರು ಈ ಸುದ್ದಿ ನೀಡಿದ್ದಾರೆ. ‘ಉತ್ತರಕಾಂಡ’ ಸಿನಿಮಾದಲ್ಲಿ ತಾವು ನಟಿಸುತ್ತಿಲ್ಲ ಎಂಬುದನ್ನು ಅವರು ತಿಳಿಸಿದ್ದಾರೆ. ಹಾಗಂತ ರಾಜಕೀಯದಲ್ಲಿ ತೊಡಗಿಕೊಳ್ಳಬಹುದೇ ಎಂಬ ಅನುಮಾನ ಮೂಡುವುದು ಸಹಜ. ಆದರೆ ಆ ಬಗ್ಗೆ ಕೂಡ ಅವರು ಸ್ಪಷ್ಟನೆ ನೀಡಿಲ್ಲ.
ಡೇಟ್ಸ್ ಕೊರತೆಯಿಂದಾಗಿ ನಾನು ಉತ್ತರಕಾಂಡದಲ್ಲಿ ಕೆಲಸ ಮಾಡುತ್ತಿಲ್ಲ.ಚಿತ್ರತಂಡಕ್ಕೆ ನಾನು ಶುಭ ಹಾರೈಸುತ್ತೇನೆ’ ಎಂದು ರಮ್ಯಾ ಅವರು ಬರೆದುಕೊಂಡಿದ್ದಾರೆ. ರಮ್ಯಾ ಅವರು ಸಿನಿಮಾದಿಂದ ಹೊರಬಂದಿರುವುದರಿಂದ ಚಿತ್ರದ ಕೆಲಸಗಳು ಇನ್ನಷ್ಟು ತಡವಾಗಬಹುದು.ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಮ್ಯಾ ಅವರು ರಾಜ್ ಬಿ. ಶೆಟ್ಟಿ ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಮೂಲಕ ಕಮ್ಬ್ಯಾಕ್ ಮಾಡಬೇಕಿತ್ತು.
ಆ ಸಿನಿಮಾವನ್ನು ನಿರ್ಮಾಣ ಮಾಡುವುದರ ಜೊತೆಗೆ ನಾಯಕಿಯಾಗಿ ಅಭಿನಯಿಸಲು ಅವರು ಮೊದಲು ಒಪ್ಪಿಕೊಂಡಿದ್ದರು. ಆದರೆ ನಂತರದಲ್ಲಿ ಅವರು ಕೇವಲ ನಿರ್ಮಾಪಕಿಯಾಗಿ ಮಾತ್ರ ಮುಂದುವರಿದರು. ನಾಯಕಿಯ ಸ್ಥಾನಕ್ಕೆ ಬೇರೆ ನಟಿಯ ಆಗಮನ ಆಗಿತ್ತು. ಈಗ ‘ಉತ್ತರಕಾಂಡ’ ಚಿತ್ರದಿಂದಲೂ ರಮ್ಯಾ ಹೊರಬಂದಿರುವುದು ಸಜಹವಾಗಿಯೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


