ತಿಪಟೂರು: ಕಾಂಗ್ರೆಸ್ ಮುಖಂಡ ಸಮಾಜ ಸೇವಕ ನಿವೃತ್ತ ಎಸಿಪಿ ಲೋಕೇಶ್ವರ್ ಅವರ ಮನೆಗೆ ಇಂದು ತುಮಕೂರು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮುದ್ದಹನುಮೇಗೌಡ ಭೇಟಿ ನೀಡಿ ಲಘು ಉಪಹಾರ ಸೇವಿಸಿದರು.
ಲೋಕೇಶ್ವರ್ ಮತ್ತು ಲೋಕೇಶ್ವರ್ ಬೆಂಬಲಿಗರಿಗೆ ನಾನು ಮುಂದಿನ ದಿನಗಳಲ್ಲಿ ಎಲ್ಲಾ ವೈ ಮನಸುಗಳನ್ನು ಸರಿಪಡಿಸಿ ಲೋಕೇಶ್ವರ್ ಬೆಂಬಲಿತರಿಗೆ ಉತ್ತಮ ಸ್ಥಾನಮಾನ ದೊರಕಿಸಿ ಕೊಡುವಲ್ಲಿ ಸಂಪೂರ್ಣ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನೀವು ನನ್ನ ಜೊತೆ ಕೈ ಜೋಡಿಸಿ ಈ ಬಾರಿ ಗೆಲ್ಲಿಸಿದರೆ, ನಾನು ಲೋಕೇಶ್ವರ್ ಮತ್ತು ಅವರ ಹಿಂಬಾಲಕರು ಮತ್ತು ಬೆಂಬಲಕರಿಗೆ ಕಾರ್ಯಕರ್ತರಿಗೆ ಏನು ಸ್ಥಾನಮಾನಗಳು ಮತ್ತು ಕಾರ್ಯ ಚಟುವಟಿಕೆಗಳು ಬರಬೇಕು ಎಂಬುದನ್ನು ನಾನು ಉತ್ತಮ ರೀತಿಯಲ್ಲಿ ಅವರಿಗೆ ಒದಗಿಸಿಕೊಡುವಲ್ಲಿ ಯಶಸ್ವಿ ಆಗುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತಿದ್ದೇನೆ ಎಂದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296