ಗದಗ: ಬಸವರಾಜ ಬೊಮ್ಮಾಯಿ ದಾವಣಗೆರೆ ಚಾರ್ಲಿ ಇದ್ದಂತೆ. ಆದರೆ ಇದೀಗ ಮುದುಕರಾಗಿದ್ದಾರೆ. ಆದರೆ ಹೊಸ ಕುಸ್ತಿ ಪಟು ಬಿಟ್ಟಾಗ ಯಾರು ಗೆಲ್ಲುತ್ತಾರೆಂದು ಗೊತ್ತಾಗುತ್ತದೆ ಸಚಿವ ಎಚ್.ಕೆ.ಪಾಟೀಲ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಚಾರ್ಲಿ ಜೊತೆಗೆ ಹೊಸ ಜಾಣ ಕುಸ್ತಿಪಟು ಇಂದು ಕಣದಲ್ಲಿ ಇದ್ದಾನೆ. ಹೀಗಾಗಿ ಆನಂದ ಗಡ್ಡದ್ದೇವರಮಠ ಗೆಲುವು ನಿಶ್ಚಿತ ಎಂದು ಅವರು ಹೇಳಿದರು.
ಕುಸ್ತಿಯಲ್ಲಿ ಬೊಮ್ಮಾಯಿ ಅವರು ದಾವಣಗೆರೆ ಚಾರ್ಲಿ ಇದ್ದರು ಆದರೆ ಇದೀಗ ಮುದುಕರಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಹಿಂದೆ ದೊಡ್ಡದೊಂದು ಲಗೇಜ್ ಇದೆ. ದೊಡ್ಡ ಭಾರ ಇದೆ. ಅವರು ಜನರಿಗೆ ಏನು ಹೇಳುತ್ತಾರೋ ಗೊತ್ತಿಲ್ಲ ಎಂದರು.
ಮೋದಿ ಅಂತ ಹೇಳಿದಾಕ್ಷಣ 15 ಲಕ್ಷ ಆಪ್ ಕಿ ಅಕೌಂಟ್ ಗೆ ಪಂದ್ರಾಲಾಕ್ ಡಾಲೂಂಗಾ ಇದು ಜನರ ಮನಸ್ಸಿಗೆ ಒಮ್ಮೆಲೆ ಥಟ್ಟನೆ ಅಂತ ಬರುತ್ತದೆ. ರೈತರಿಗೆ ಆದಾಯ ದುಪ್ಪಟ್ಟಾಗುತ್ತೆ ಅಂತ ಹೇಳಿದ್ದರು.
ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡ್ತಿವಿ ಅಂದಿದ್ರು ಇವೆಲ್ಲ ಅವರ ಹಿಂದೆ ದೊಡ್ಡ ಭಾರಗಳಿವೆ ಬಿಜೆಪಿಯ ಸುಳ್ಳು ಭರವಸೆಗಳಿಂದ ಬೊಮ್ಮಾಯಿ ಎದ್ದು ನಿಲ್ಲಲಾರದಷ್ಟು ಅನಾನುಕೂಲತೆ ಎದುರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


