ತುರುವೇಕೆರೆ: “ಮತದಾನ ಬಹಿಷ್ಕರಿಸಿ ಲೋಕಸಭಾ ಚುನಾವಣೆ ಸಂಬಂಧ ಮತದಾನದ ಹಕ್ಕನ್ನು ಚಲಾಯಿಸದೆ ಇರಬೇಡಿ. ನಿಮ್ಮ ಹಕ್ಕನ್ನು ನೀವು ಚಲಾಯಿಸದಿದ್ದರೆ ಒಂದು ಅಧ್ಬುತವಾದ ಶಕ್ತಿಯನ್ನುಕಳೆದುಕೊಳ್ಳುತ್ತೀರಿ. ನಿಮ್ಮ ಹೋರಾಟ ಏನೇ ಇದ್ದರೂ ನಾವು ಅದಕ್ಕೆ ಸ್ಫಂದಿಸುತ್ತೇವೆ” ಎಂದು ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಮನವಿ ಮಾಡಿದರು.

ಕೋಬಾಲ್ಡ್ ಹಾಗೂ ನಿಕ್ಕಲ್ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ, ಸ್ಥಳೀಯ ರೈತರು ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿದ್ದ ಹಿನ್ನಲೆಯಲ್ಲಿ, ತಿಪಟೂರು ಉಪವಿಭಾಗಾಧಿಕಾರಿಗಳು ಕೋಡಿಹಳ್ಳಿ ಕುಣಿಕೇನಹಳ್ಳಿ ಗ್ರಾಮಗಳಲ್ಲಿ ಮತದಾನ ಜಾಗೃತಿ ಸಭೆ ನಡೆಸಿದರು. ಚುನಾವಣಾಧಿಕಾರಿ ಜಿ.ಎನ್. ಮಂಜುನಾಥ್, ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಕುಣಿಗಲ್ ಡಿ.ವೈ.ಎಸ್ ಪಿ ಓಂ ಪ್ರಕಾಶ್ ಸರ್ಕಲ್ ಇನ್ಸ್ಪೆಕ್ಟರ್ ಲೋಹಿತ್ ಕುಮಾರ್ ಹಾಗೂ ರೆವಿನ್ಯೂ ಇಲಾಖಾಧಿಕಾರಿಗಳು ಮಂಗಳವಾರ ದುಂಡ ಗ್ರಾಮಕ್ಕೆ ಆಗಮಿಸಿದ ಸಂಧರ್ಭದಲ್ಲಿ, ಗ್ರಾಮಸ್ಥರು ಒಕ್ಕೊರಲಿನಿಂದ “ಗಣಿಗಾರಿಕೆ ಬಗ್ಗೆ ನಿಖರ ಮಾಹಿತಿ ನೀಡುವವರೆಗೂ ನಾವ್ಯಾರೂ ಮತ ಹಾಕುವುದಿಲ್ಲ” ಎಂಬ ವಿಚಾರವಾಗಿ ಇಂದು, ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಕೋಡಿಹಳ್ಳಿ ಹಾಗೂ ಕುಣಿಕೇನ ಹಳ್ಳಿಯಲ್ಲಿ ಸುತ್ತಮುತ್ತಲ ಗ್ರಾಮಸ್ಥರನ್ನು ಸೇರಿಸಿ ಮತದಾನದ ಬಗ್ಗೆ ಜಾಗೃತಿ ಸಭೆ ನಡೆಸಿ ರೈತರ ಅಹವಾಲುಗಳನ್ನು ಆಲಿಸಿದರು.

ಸ್ಥಳೀಯ ರೈತಮುಖಂಡರು ಮಾತನಾಡಿ, “ಈ ಭಾಗದಲ್ಲಿ ಕೋಬಾಲ್ಡ್ ಮತ್ತು ನಿಕ್ಕಲ್ ಗಣಿಯನ್ನು ಸರ್ಕಾರ ಈಗಾಗಲೇ ಪ್ರಾರಂಬಿಸಲು ಹೊರಟಿದ್ದು, ಇಲ್ಲಿ ಗಣಿಗಾರಿಕೆಯನ್ನು ಮಾಡಿದಲ್ಲಿ ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದು ಕೃಷಿಕರನ್ನಾಗಿಯೇ ನಮ್ಮನ್ನು ಉಳಿಸಿ. ನಮ್ಮ ಜಮೀನನ್ನು ಕಬಳಿಸಿ ಗಣಿಗಾರಿಕೆ ಸ್ಥಾಪಿಸಲು ಸರ್ಕಾರ ಮುಂದಾಗಿರುವುದನ್ನು ವಿರೋದಿಸುತ್ತೇವೆ. ಪರಿಸರ ನಾಶವಾಗಿ ಹಲವಾರು ಮಾರಣಾಂತಿಕ ಖಾಯಿಲೆಗಳು ಬರಲಿದೆ. ಹಾಗೊಂದು ವೇಳೆ ಸರ್ಕಾರ ಗಣಿಗಾರಿಕೆಗೆ ಮುಂದಾದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ” ಒಕ್ಕೊರಲಿನಿಂದ ತಿಳಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಉಪವಿಭಾಗಾಧಿಕಾರಿಗಳು, “ಲೋಕಸಭಾ ಚುನಾವಣೆ ಸಂಬಂದ ಮತದಾನದ ಹಕ್ಕನ್ನು ಚಲಾಯಿಸದೆ ಇರಬೇಡಿ. ನಿಮ್ಮ ಹಕ್ಕನ್ನು ನೀವು ಚಲಾಯಿಸದಿದ್ದರೆ ಒಂದು ಅಧ್ಬುತವಾದ ಶಕ್ತಿಯನ್ನುಕಳೆದುಕೊಳ್ಳುತ್ತೀರಿ. ನಿಮ್ಮ ಹೋರಾಟ ಏನೇ ಇದ್ದರೂ ನಾವು ಅದಕ್ಕೆ ಸ್ಫಂದಿಸುತ್ತೇವೆ. ಸರ್ಕಾರ ನೀಡಿರುವ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡುತ್ತಿದ್ದು, ಸರ್ಕಾರಿ ನೌಕರರು ಸರ್ಕಾರ ಮತ್ತು ಜನರ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿರುತ್ತೇವೆ. ನೀವುಗಳು ಕಾನೂನನ್ನು ಕೈಗೆತ್ತಿಕೊಳ್ಳದೆ, ಮುಂಬರುವ ಚುನಾವಣೆಯ ಮತದಾನ ದಿನ ಮತದಾನ ಮಾಡಿ. ಇಲ್ಲವಾದಲ್ಲಿ ನಮ್ಮ ಬಲವಂತವೇನಿಲ್ಲ. ಮತದಾನ ಮಾಡುವುದು ಬಿಡುವುದು ನಿಮಗೆ ಬಿಟ್ಟ ವಿಚಾರ” ಎಂದು ಗ್ರಾಮಸ್ಥರಿಗೆ ಮತದಾನದ ಬಗ್ಗೆ ಮನದಟ್ಟು ಮಾಡಿದರು.

ಆದರೂ ಗ್ರಾಮಸ್ಥರು, “ಇಲ್ಲಿ ಗಣಿಗಾರಿಕೆ ಮಾಡಲು ನಾವುಗಳು ಒಪ್ಪುವುದಿಲ್ಲ. ಗಣಿಗಾರಿಕೆ ಕೈಬಿಟ್ಟರೆ ಮಾತ್ರ ಮತದಾನ ಮಾಡುವುದಾಗಿ” ತಮ್ಮ ನಿಲುವನ್ನು ಅಧಿಕಾರಿಗಳಿಗೆ ತಿಳಿಸಿದರು.
ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಎ.ಆರ್.ಓ. ಮಂಜುನಾಥ್, ಡಿವೈಎಸ್ಪಿ ಓಂಪ್ರಕಾಶ್, ಸಿಪಿಐ ಲೋಹಿತ್, ಎಸೈ ಚಂದ್ರಕಾಂತ್ ಮತದಾನದ ಮಹತ್ವವನ್ನು ಗ್ರಾಮಸ್ಥರಿಗೆ ತಿಳಿಸಿಕೊಟ್ಟರು. ಈ ಸಂಧರ್ಭದಲ್ಲಿ ಕೋಡಿಹಳ್ಳಿ,ದುಂಡ, ಕುಣಿಕೇನಹಳ್ಳಿ, ಬಾಣಸಂದ್ರ ಬಲಮಾದಿಹಳ್ಳಿ ಸೇರಿದಂತೆ ಸುತ್ತಮುತ್ತ ಗ್ರಾಮದ ಮುಖಂಡರುಗಳಾದ ಗ್ರಾ.ಪಂ.ಸದಸ್ಯರಾದ ದುಂಡಶಿವಕುಮಾರ್, ನವೀನ್, ಮಾಜಿ ಸದಸ್ಯ ಪ್ರಕಾಶ್, ತಾ.ಪಂ.ಮಾಜಿ ಸದಸ್ಯೆಲಕ್ಷ್ಮೀದೇವಮ್ಮ, ಡೈರಿ ಅಧ್ಯಕ್ಷ ಸುರೇಶ್, ಪರಮೇಶ್, ಈಶ್ವರಯ್ಯ, ಮಲ್ಲಿಕಾರ್ಜುನ್, ನಾಗಮ್ಮ, ಜ್ಯೋತಿ, ಕಿಟ್ಟಿ,ಶಶಿಧರ್, ಪರಮೇಶ್, ಮಂಜುನಾಥ್, ಬಸವಣ್ಣ, ಗುರುಲಿಂಗಯ್ಯ, ಯೋಗೀಶ್, ಎ.ಪಿ.ಎಂ.ಸಿ ಸದಸ್ಯ ನರಸಿಂಹರಾಜು, ಕೃಷ್ಣಸ್ವಾಮಿ, ಚಂದ್ರಣ್ಣ, ಕುಮಾರ್, ಶೇಖರಣ್ಣ, ಆನಂದ್, ಬಸವರಾಜು, ಮಲ್ಲಿಕ್ , ಕಲಾವತಿ, ಸಾವಿತ್ರಮ್ಮ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ: ಸುರೇಶ್ ಬಾಬು ಎಂ ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


