ಯುವತಿಯೋರ್ವಳು ವೃದ್ದನಿಗೆ ವಿಡಿಯೋ ಕಾಲ್ ಮಾಡಿ ಲಕ್ಷಾಂತರ ರೂ. ವಂಚನೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ವಂಚಕರು ಮೊದಲಿಗೆ ಯುವತಿಯಿಂದ ವಿಡಿಯೋ ಕಾಲ್ ಮಾಡಿಸುತ್ತಾರೆ. ನಂತರ ವಿಡಿಯೋ ಕಾಲ್ನಲ್ಲಿ ಯುವತಿ ನಗ್ನವಾಗಿ ಬಳಿಕ ವೃದ್ಧರನ್ನು ನಗ್ನವಾಗುವಂತೆ ತಿಳಿಸುತ್ತಾರೆ.ನಂತರ ಕೆಲವು ಸಮಯಗಳ ಬಳಿಕ ನೀನು ನನ್ನ ವಿಡಿಯೋ ಕಾಲ್ ಅನ್ನು ಸ್ಕ್ರೀನ್ ರೆಕಾರ್ಡ್ ಮಾಡಿದ್ದೀಯಾ ನಾನು ನಿನ್ನ ಮೇಲೆ ಪೊಲೀಸರಿಗೆ ದೂರು ನೀಡುತ್ತೆನೆ ಎಂದು ಬ್ಲಾಕ್ ಮೇಲ್ ಮಾಡುತ್ತಾರೆ. ಇದಾದ ಕೆಲವೆ ಗಂಟೆಗಳಲ್ಲಿ ಡೆಲ್ಲಿ ಸೈಬರ್ ಪೊಲೀಸ್ ಎಸಿಪಿ ವಿಕ್ರಮ್ ರಾಥೋಡ್ ಎಂದು ಕರೆ ಮಾಡುತ್ತಾರೆ. ನಿಮ್ಮ ಮೇಲೆ ಯುವತಿ ಒಬ್ಬರು ದೂರು ನೀಡಿದ್ದಾರೆ. ನೀವು ಅವರ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿದ್ದೀರಿ ಎಂದು ದೂರು ಬಂದಿದೆ. ನಾನು ನಿಮಗೆ ಸಹಾಯ ಮಾಡುತ್ತೇನೆ 50 ಸಾವಿರ ಹಣ ನೀಡಿ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಾರೆ.
ನಂತರ ವಂಚಕರು ವೃದ್ದನಿಗೆ ಕಾಲ್ ಮಾಡಿ ಪುಣೆ ಎಸಿಪಿ ಅರುಣ ಎಂದು ನಂಬಿಸಿ ನಿಮ್ಮ ಹೆಸರು ಮತ್ತು ಡೀಟೈಲ್ಸ್ ನೀಡಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈ ಪ್ರಕರಣದಲ್ಲಿ ಪೊಲೀಸರು ನಿಮ್ಮನ್ನು ಬಂಧಿಸುತ್ತಾರೆ ಎಂದು ಬೆದರಿಕೆ ಹಾಕುತ್ತಾರೆ. ಪ್ರಕರಣ ದಿಂದ ಮುಕ್ತಿ ನೀಡಲು 40 ಲಕ್ಷ ಹಣಕ್ಕೆ ಡಿಮಾಂಡ್ ಮಾಡುತ್ತಾರೆ. ಆಡ್ವಾನ್ಸ್ ಎಂದು ಹೇಳಿ ವಂಚಕರು ಒಂದು ಲಕ್ಷ ಪಡೆದಿದ್ದಾರೆ. ಹೀಗೆ ಪದೆ ಪದೇ ಕರೆ ಬಂದ ಹಿನ್ನೆಲೆ ಅನುಮಾನ ಬಂದು ವೃದ್ಧ ದತ್ತಾತ್ರೇಯ ಭಟ್ (63 ) ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ. ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


