ಕೊಡಗು-ಮೈಸೂರು ಕ್ಷೇತ್ರದಿಂದ 2 ಅವಧಿಗೆ ಸಂಸದರಾಗಿ ಆಯ್ಕೆಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಪ್ರತಾಪ್ ಸಿಂಹ ಅವರ ಈ ಸಲದ ಟಿಕೆಟ್ ಯದುವೀರ್ ಅವರ ಪಾಲಾಗಿದೆ. ಆದರೆ ಯುವ ನೇತಾರ, ನಾಯಕನಿಗೆ ಬಿಜೆಪಿ ಯಾಕೆ ಹೀಗೆ ಮಾಡಿತು ಎಂದು ಎಲ್ಲರೂ ಬೇಸರ ಪಟ್ಟುಕೊಂಡಿದ್ದರು. ಅಲ್ಲದೆ ಟಿಕೆಟ್ ತಪ್ಪಿದ್ಯಾಕೆ, ತಪ್ಪಿಸಿದ್ಯಾರು ಎಂಬುದೇ ಯಕ್ಷ ಪ್ರಶ್ನೆ ಆಗಿತ್ತು. ಇದೀಗ ಈ ಬಗ್ಗೆ ಕಾಂಗ್ರೆಸ್ ಸಚಿವ ವೆಂಕಟೇಶ್ ಅವರು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಹೌದು, ಮೈಸೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಚಿವ ಕೆ. ವೆಂಕಟೇಶ್, ಪ್ರತಾಪ್ ಸಿಂಹ ಒಕ್ಕಲಿಗ. ಒಕ್ಕಲಿಗರಿಗೆ ಒಕ್ಕಲಿಗರೇ ಮುಳುವಾಗಿದ್ದಾರೆ. ನಮ್ಮ ಸಮಾಜದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ತಪ್ಪಿಸಿ ಯದುವೀರ್ಗೆ ಟಿಕೆಟ್ ಕೊಟ್ಟಿದ್ದಾರೆ. ಮೊದಲು ಯದುವೀರ್ ಹೆಸರು ಇರಲೇ ಇಲ್ಲ. ಆದರೆ ದೇವೆಗೌಡರೇ ಮುಂದಾಳತ್ವ ವಹಿಸಿ, ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿ ಯದುವೀರ್ ಅವರನ್ನ ನಿಲ್ಲಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಅಲ್ಲದೆ ನಮಗ್ಯಾರಿಗೂ ಮೈಸೂರಲ್ಲಿ ಯದುವೀರ್ ಅವರು ರಾಜಕೀಯಕ್ಕೆ ಬರುತ್ತಾರೆ ಎಂದು ಎಂದಿಗೂ ಗೊತ್ತಿರಲಿಲ್ಲ. ಕೊನೆವರೆಗೂ ತಿಳಿದಿರಲಿಲ್ಲ. ಆದರೆ ದಿಢೀರ್ ಎಂದು ಹೆಸರು ಸೇರಿತ್ತು. ಇದರ ಹಿಂದೆ ಅನೇಕ ಉದ್ದೇಶಗಳಿದ್ದು ಅವರು, ಮಂಡ್ಯ, ಹಾಸನಕ್ಕೆ ಅನುಕೂಲವಾಗುತ್ತೆ ಅಂತ ಅವರ ಸ್ವಾರ್ಥಕ್ಕಾಗಿ ಯದುವೀರ್ ಒಡೆಯರ್ ಅವರನ್ನು ನಿಲ್ಲಿಸಿದ್ದಾರೆ. ನಾನು ದೇವೇಗೌಡರ ಹತ್ತಿರ ಸಂಬಂಧಿ. ಅವರು ಸ್ವಾರ್ಥ ಎಂಬ ಕಾರಣಕ್ಕೆ ನಾನು ದೂರ ಉಳಿದೆ ಎಂದೂ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


