ತುಮಕೂರು: ಜಿಲ್ಲೆಯಾದ್ಯಂತ ಯುಗಾದಿ ಹಬ್ಬದ ದಿನ ಹಾಗೂ ಮಾರನೆಯ ದಿನ ಆದೇಶ ಹೊರಡಿಸಿದ್ದರು ಸಹ ಆದೇಶವನ್ನು ಉಲ್ಲಂಘಿಸಿರುವ 291 ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಪಣಕ್ಕೆ ಇಟ್ಟಿದ್ದ 3,21,895 ರೂಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಯುಗಾದಿಯ ಹೊಸ ವರ್ಷದ ದಿನ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸ್ ರಿಂದ ದಾಳಿ ಮಾಡಲಾಗಿದೆ. ಜೂಜಾಟದಲ್ಲಿ ತೊಡಗಿದ್ದ ಜೂಜು ಅಡ್ಡಗಳ ಮೇಲೆ ತುಮಕೂರು ಜಿಲ್ಲಾ ಉಪವಿಭಾಗದ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಪ್ರಕರಣವನ್ನು ದಾಖಲಿಸಿರುತ್ತಾರೆ.
ತುಮಕೂರು ನಗರ ಉಪವಿಭಾಗದಿಂದ 15 ಪ್ರಕರಣಗಳು, 77 ಜನರನ್ನು ದಸ್ತಗಿರಿ ಮಾಡಿ ಜೂಜಾಟದಲ್ಲಿ ಪಣಕ್ಕೆ ಇಟ್ಟಿದ್ದ ಹಣ 1,15,350 ವಶಪಡಿಸಕೊಳ್ಳಲಾಗಿದೆ. ತಿಪಟೂರು ಉಪವಿಭಾಗದಿಂದ 11 ಪ್ರಕರಣಗಳು, 63 ಜನರನ್ನು ದಸ್ತಗಿರಿ ಮಾಡಿ ಜೂಜಾಟದಲ್ಲಿ ಪಣಕ್ಕೆ ಇಟ್ಟಿದ್ದ ಹಣ 94095 ವಶಪಡಿಸಿಕೊಂಡಿದ್ದಾರೆ.
ಶಿರಾ ಉಪವಿಭಾಗದಿಂದ 20 ಪ್ರಕರಣಗಳು, 108 ಜನರನ್ನು ದಸ್ತಗಿರಿ ಮಾಡಿ ಜೂಜಾಟದಲ್ಲಿ ಪಣಕ್ಕೆ ಇಟ್ಟಿದ್ದ ಹಣ 83050 ವಶಪಡಿಸಿಕೊಳ್ಳಲಾಗಿದೆ.
ಮಧುಗಿರಿ ಉಪವಿಭಾಗದಿಂದ 07 ಪ್ರಕರಣಗಳು, 43 ಜನರನ್ನು ದಸ್ತಗಿರಿ ಮಾಡಿ ಜೂಜಾಟದಲ್ಲಿ ಪಣಕ್ಕೆ ಇಟ್ಟಿದ್ದ ಹಣ 29340 ವಶಪಡಿಸಿಕೊಳ್ಳಲಾಗಿದೆ.
ಒಟ್ಟು ತುಮಕೂರು ಜಿಲ್ಲಾದ್ಯಂತ 53 ಪ್ರಕರಣಗಳು, 291 ಜನರನ್ನು ದಸ್ತಗಿರಿ ಮಾಡಿ ಜೂಜಾಟದಲ್ಲಿ ಪಣಕ್ಕೆ ಇಟ್ಟಿದ್ದ ಹಣ 3,21,835:00 ವಶಪಡಿಸಿಕೊಳ್ಳಲಾಗಿದೆ.
ಸಾರ್ವಜನಿಕವಾಗಿ ಪ್ರಚಾರವನ್ನು ಮಾಡಲಾಗಿತ್ತು ಹೀಗಿದ್ದರೂ ಕೂಡ ಸಾರ್ವಜನಿಕರು ಜೂಜಾಟದಲ್ಲಿ ತೊಡಗಿದ್ದರು ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


