ವಿದ್ಯಾರ್ಥಿಯೊಬ್ಬ “ನನಗೆ ಉತ್ತಮ ಅಂಕ ನೀಡದಿದ್ದರೆ ನನ್ನ ತಾತನಿಗೆ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿ” ಎಂದು ಬರೆದು ಬೆದರಿಕೆ ಹಾಕಿದ್ದಾನೆ.
ಮೌಲ್ಯಮಾಪನದ ಸಂದರ್ಭದಲ್ಲಿ ಕೆಲವೊಂದು ವಿದ್ಯಾರ್ಥಿಗಳು ಬರೆಯುವ ನನ್ನನ್ನು ಪಾಸ್ ಮಾಡಿ, ಮನವಿ ಮಾಡುವಂತಹ ಅನೇಕ ಸುದ್ದಿಗಳು ಕೇಳಿ ಬರುತ್ತಿದೆ. ಅಂತಹುದೇ ಒಂದು ಸುದ್ದಿ ಇದೀಗ ವೈರಲ್ ಆಗಿದೆ. ಅದರಲ್ಲಿ ವಿದ್ಯಾರ್ಥಿಯೊಬ್ಬ “ನನಗೆ ಉತ್ತಮ ಅಂಕ ನೀಡದಿದ್ದರೆ ನನ್ನ ತಾತನಿಗೆ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿ” ಎಂದು ಬರೆದು ಬೆದರಿಕೆ ಹಾಕಿದ್ದಾನೆ.
ಅಂದಹಾಗೆ, ಈ ಘಟನೆ ನಡೆದಿರುವುದು ಆಂಧ್ರಪ್ರದೇಶದಲ್ಲಿ. ಇತ್ತೀಚೆಗೆ ಇಲ್ಲಿ 10 ನೇ ತರಗತಿ ಬೋರ್ಡ್ ಪರೀಕ್ಷೆ ನಡೆದಿದ್ದು, ಉತ್ತರ ಮೌಲ್ಯಮಾಪನ ಸಂದರ್ಭದಲ್ಲಿ ಈ ಕೆಲಸ ಪತ್ತೆಯಾಗಿದೆ. ಬಾಪಟ್ಲ ಮುನ್ಸಿಪಲ್ ಹೈಸ್ಕೂಲ್ ನಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು, ಪೇಪರ್ ತಿದ್ದುವ ಸಂದರ್ಭದಲ್ಲಿ ಶಿಕ್ಷಕರೊಬ್ಬರು ಉತ್ತರಪತ್ರಿಕೆಯಲ್ಲಿ ಈ ಉತ್ತರ ಕಂಡು ಶಾಕ್ ಆಗಿದ್ದಾರೆ.
ರಾಮಾಯಣದ ಮಹತ್ವವವನ್ನು ವಿವರಿಸಿ ಎನ್ನುವ ಪ್ರಶ್ನೆಗೆ ಉತ್ತರದ ರೂಪದಲ್ಲಿ ಇದನ್ನು ಬರೆಯಲಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


