ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿಮ ನರೇಗಲ್ ಪಟ್ಟಣದಲ್ಲಿ ಪ್ರೇಮಿಗಳಿಬ್ಬರು ಒಂದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನರೇಗಲ್ ಪಟ್ಟಣದ ಅಪ್ಪಣ್ಣ ಗೊರಕಿ(28), ಲಲಿತಾ ಹಲಗೇರಿ (21) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳಾಗಿದ್ದಾರೆ.
ಅಪ್ಪಣ್ಣ ಗೊರಕಿ ಹಾಗೂ ಲಲಿತಾ ನಡುವಿನ ಪ್ರೀತಿಗೆ ಮನೆಯವರ ಒಪ್ಪಿಗೆ ಇರಲಿಲ್ಲ ಎಂದು ತಿಳಿದು ಬಂದಿದೆ. ಮನೆಯವರ ಬಲವಂತಕ್ಕೆ ಲಲಿತಾ ಇದೇ ಏಪ್ರಿಲ್ 4 ರಂದು ಬೇರೆ ಯುವಕನೊಂದಿಗೆ ಮದುವೆಯಾಗಿದ್ದಳು.
ಈ ಮದುವೆಯಿಂದ ಅಪ್ಪಣ್ಣ-ಲಲಿತಾ ಇಬ್ಬರು ಮನ ನೊಂದಿದ್ದರು. ಬೇರೊಬ್ಬನ ಜತೆಗೆ ಮದುವೆ ಆಗಿದ್ದರೂ, ಅಣ್ಣಪ್ಪನ ಗುಂಗಿನಲ್ಲೇ ಇದ್ದರು. ಅಪ್ಪಣ್ಣ-ಲಲಿತಾ ಇಬ್ಬರು ಮನನೊಂದು ಊರಿನ ಹೊರವಲಯದ ಖಾಲಿ ಜಾಗದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಿನ ಜಾವ ಗ್ರಾಮದ ಜನರು ಗದ್ದೆ ಕೆಲಸಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನರೇಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


