ಉಳಿದುಕೊಳ್ಳಲು ಮನೆ ಇಲ್ಲದೆ ಇದ್ರೆ ಅಂತಹ ಸಂದರ್ಭದಲ್ಲಿ ಕೃಷಿ ಭೂಮಿಯಲ್ಲಿ ಕೆಲವು ರೈತರು ಮನೆ ನಿರ್ಮಾಣ ಮಾಡಿಕೊಳ್ಳುತ್ತಾರೆ. ಇದಕ್ಕೂ ಪರ್ಮಿಷನ್ ಬೇಕಾಗುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಭೂಮಿಯನ್ನು ಬೇರೆಬೇರೆ ಕಮರ್ಷಿಯಲ್ ಕಟ್ಟಡಕ್ಕಾಗಿ ಬಳಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ.
ಈ ರೀತಿ ಫಸಲು ನೀಡುವ ಭೂಮಿಯನ್ನು ಪರಿವರ್ತಿಸಿ ಕಮರ್ಷಿಯಲ್ ಆಗಿ ಬದಲಾಯಿಸುತ್ತಾ ಹೋದರೆ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆ ಸಂಪೂರ್ಣವಾಗಿ ನಾಶವಾಗಬಹುದು. ಇದಕ್ಕಾಗಿ ಸರ್ಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದು ನಿಮ್ಮ ಸ್ವಂತ ಜಮೀನೆ ಆಗಿದ್ದರು, ಅದು ಕೃಷಿ ಭೂಮಿ ಆಗಿದ್ದರೆ ನೀವು ಸುಲಭವಾಗಿ ಅಲ್ಲಿ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಿಲ್ಲ.
ಸ್ವಂತ ಜಮೀನು ಹೊಂದಿರುವ ರೈತರು ಕೂಡ ತಮ್ಮ ಕೃಷಿ ಭೂಮಿಯಲ್ಲಿ ಸುಲಭವಾಗಿ ಯಾವುದೇ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿಲ್ಲ. ಕೃಷಿಯೇತರ ಚಟುವಟಿಕೆಗೆ ಕೃಷಿ ಭೂಮಿಯನ್ನು ಬಳಕೆ ಮಾಡುವಂತಿಲ್ಲ ಈ ರೀತಿ ಮಾಡಿದರೆ ಅಂತವರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ.
ಇನ್ನು ಕೆಲವು ಅನಿವಾರ್ಯ ಪರಿಸ್ಥಿತಿಯಲ್ಲಿ ಉದಾಹರಣೆಗೆ ಉಳಿದುಕೊಳ್ಳಲು ಮನೆ ಇಲ್ಲದೆ ಇರುವಾಗ ತಮ್ಮ ಕೃಷಿ ಭೂಮಿಯಲ್ಲಿ ಸ್ವಲ್ಪ ಭಾಗವನ್ನು ಮನೆ ನಿರ್ಮಾಣ ಮಾಡಿಕೊಳ್ಳಲು ರೈತರು ಬಳಸಿಕೊಳ್ಳಬಹುದು. ಆದರೆ ಇದಕ್ಕಾಗಿ ಕೃಷಿ ಭೂಮಿಯನ್ನು ನಾನ್ ಅಗ್ರಿಕಲ್ಚರ್ ಲ್ಯಾಂಡ್ ಎಂದು ಕನ್ವರ್ಷನ್ ಮಾಡಿಕೊಳ್ಳಬೇಕಾಗುತ್ತದೆ. ಈ ರೀತಿ ಲ್ಯಾಂಡ್ ಕನ್ವರ್ಷನ್ ಮಾಡಿಕೊಂಡು ನೀವು ಕಟ್ಟಡ ನಿರ್ಮಾಣ ಮಾಡಬಹುದು.
NOC ಸರ್ಟಿಫಿಕೇಟ್ ಪಡೆದುಕೊಳ್ಳಿ!
ಇನ್ನು ಲ್ಯಾಂಡ್ ಕನ್ವೆರ್ಶನ್ ಆದ ನಂತರ ಆ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಯಾವುದೇ ತೊಂದರೆ ಇಲ್ಲ ಎಂಬುದಕ್ಕಾಗಿ ಎನ್ ಓ ಸಿ ಸರ್ಟಿಫಿಕೇಟ್ ಅನ್ನು ಗ್ರಾಮ ಪಂಚಾಯತ್ ಅಥವಾ ಮುನ್ಸಿಪಾಲ್ಟಿ ಇಂದ ಪಡೆದುಕೊಳ್ಳಬೇಕಾಗುತ್ತದೆ. ಈ ರೀತಿ ಮಾಡಿ ನೀವು ನಿಮ್ಮ ಕೃಷಿ ಭೂಮಿಯನ್ನು ಕನ್ವರ್ಷನ್ ಮಾಡುವ ಮೂಲಕ ಕಟ್ಟಡ ನಿರ್ಮಾಣ ಮಾಡಿಕೊಳ್ಳಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


