ತಿಪಟೂರು: ತಾಲ್ಲೋಕಿನ ಹಾಲ್ಕುರಿಕೆ ಗ್ರಾಮದಲ್ಲಿ ಡಾ//ಬಿ.ಆರ್. ಅಂಬೇಡ್ಕರ್ ಸ್ವಾಭಿಮಾನಿ ಯುವಕ ಸಂಘ ಹಾಗೂ ಶ್ರೀ ಚಿತ್ರಲಿಂಗೇಶ್ವರ ಯುವಕ ಸಂಘದ ವತಿಯಿಂದ ಸಂವಿಧಾನಶಿಲ್ಪಿ ಡಾ//ಬಿ.ಆರ್. ಅಂಬೇಡ್ಕರ್ ರವರ ಜಯಂತಿಯನ್ನ ಅದ್ದೂರಿಯಾಗಿ ಆಚರಿಸಲಾಯಿತು
ಹಾಲ್ಕುರಿಕೆ ಗ್ರಾಮಪಂಚಾಯ್ತಿ ಅಧ್ಯಕ್ಷ ಸೋಮಶೇಖರ್, ಡಾ//ಬಿ.ಆರ್. ಅಂಬೇಡ್ಕರ್ ಹಾಗೂ ಡಾ//ಬಾಬು ಜಗಜೀವನ್ ರಾಂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ದೇಶಿಸಿ ವಿಶ್ವಕಂಡ ಮಹಾನ್ ಜ್ಞಾನಿ ಡಾ//ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಕಂಡ ನೋವು ನಲಿವುಗಳ ಜ್ಞಾನದ ಆಧಾರದ ಮೇಲೆ ಭಾರತ ಸೇರಿದಂತೆ ಹಲವಾರು ದೇಶಗಳಿಗೆ ಸಂವಿಧಾನ ರಚಿಸಿ ಕೊಟ್ಟಿದ್ದಾರೆ.
ಹಲವಾರು ಪ್ರಾಂತ್ಯ, ಭಾಷೆ, ಜಾತಿ ಧರ್ಮಗಳನ್ನ ಒಳಗೊಂಡ ಭಾರತ ದೇಶಕ್ಕೆ ಸರ್ವಶ್ರೇಷ್ಠ ಸಂವಿಧಾನ ನೀಡಿದ್ದಾರೆ.
ಮಾನವೀಯ ಮೌಲ್ಯಗಳ ಸಾಗರವಾಗಿರುವ ನಮ್ಮ ಸಂವಿಧಾನವನ್ನ ದೇಶದ ಪ್ರತಿಯೊಬ್ಬ ಪ್ರಜೆ ಗೌರವಿಸಿ ಅಳವಡಿಸಿಕೊಳ್ಳ ಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಬಿ. ಉಮಾಮಹೇಶ್ ಮುಖಂಡರಾದ ಕರಿಯಪ್ಪ, ರಂಗನಾಥ್ ಮಂಜುನಾಥ್, ಲೋಕೇಶ್,ಸಾಗರ್ ,ಕರಿಯಪ್ಪ,ಶಂಕರ್, ಧರ್ಮ, ದೊಡ್ಡೀರಯ್ಯ ಮುಂತ್ತಾದವರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


