nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ

    July 22, 2026

    ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ

    July 22, 2026

    ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್‌ ಬುಕ್ ವಿತರಣೆ

    July 22, 2026
    Facebook Twitter Instagram
    ಟ್ರೆಂಡಿಂಗ್
    • ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ
    • ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ
    • ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್‌ ಬುಕ್ ವಿತರಣೆ
    • ಪ.ಪಂ. ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಅವರ 63ನೇ ಜನ್ಮದಿನಾಚರಣೆ
    • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ: ಪ್ರವೇಶಾತಿಗೆ ಅರ್ಜಿ ಆಹ್ವಾನ
    • ಗೋನೆಗಾರರು ಕೇರಾ ಸುರಕ್ಷಾ ವಿಮಾ ಯೋಜನೆ ಪ್ರಯೋಜನೆ ಪಡೆಯಲು ತೋಟಗಾರಿಕೆ ಇಲಾಖೆ ಮನವಿ
    • 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
    • ತುಮಕೂರು: ಗಾಂಜಾ ಸಾಗಣೆ: ಅಪರಾಧಿಗೆ 4 ವರ್ಷ ಕಠಿಣ ಶಿಕ್ಷೆ; ದಂಡ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕನ್ನಡಿಗರಿಗೆ ಅನ್ಯಾಯವಾದರೂ ಒಂದು ದಿನ ಬಿಜೆಪಿಯ ಸಂಸದರು ಈ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆಯೇ?: ಸಿಎಂ ಸಿದ್ದರಾಮಯ್ಯ
    ರಾಜ್ಯ ಸುದ್ದಿ April 15, 2024

    ಕನ್ನಡಿಗರಿಗೆ ಅನ್ಯಾಯವಾದರೂ ಒಂದು ದಿನ ಬಿಜೆಪಿಯ ಸಂಸದರು ಈ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆಯೇ?: ಸಿಎಂ ಸಿದ್ದರಾಮಯ್ಯ

    By adminApril 15, 2024No Comments4 Mins Read
    c.m siddaramaya

    ತುಮಕೂರು(ಕೆ.ಬಿ.ಕ್ರಾಸ್): ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯವಾದರೂ ಒಂದು ದಿನ ಬಿಜೆಪಿಯ ಸಂಸದರು ಈ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆಯೇ? ಮಾತನಾಡ ಡಿದ್ದರೆ ಇವರು ಲೋಕಸಭೆಗೆ ಯಾಕೆ ಹೋಗಬೇಕು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

    ಅವರು ತುಮಕೂರು ಲೋಕಸಭಾ ಚುನಾವಣೆಯ ತಮ್ಮ ಪಕ್ಷದ ಅಭ್ಯರ್ಥಿಯಾದ ಮುದ್ಧುಹನುಮೇಗೌಡ ಅವರ ಪರ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ನಂತರ ತಮ್ಮ ಅಭ್ಯರ್ಥಿಯ ಪರ ಮತದಾರರಲ್ಲಿ ಮತಯಾಚನೆ ಮಾಡಿ ಮಾತನಾಡಿದರು.

    ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸದಸ್ಯರು ಆಯ್ಕೆಯಾಗಿದ್ದರು. ಅದರಲ್ಲಿ ಬಸವರಾಜ್ ಕೂಡ ಒಬ್ಬರು ಈಗ ಸುಮಲತಾ ಅಂಬರೀಶ್ ಹಾಗು ಜೆಡಿಎಸ್ ನಿಂದ ಗೆದ್ದ ಪ್ರಜ್ವಲ್ ಗೌಡ ಸೇರಿ 27 ಜನ ಆಗಿದ್ದಾರೆ. ಕರ್ನಾಟಕಕ್ಕೆ ಅನ್ಯಾಯವಾಗಿದೆ . ಬರಗಾಲ ಬಂದರೂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಕರ್ನಾಟಕಕ್ಕೆ 15 ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ಹಣವನ್ನೂ ಕೊಡಲಿಲ್ಲ. ಅವರೇ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಗೆ 5300 ಕೋಟಿ ಕೊಡುತ್ತೇವೆ ಎಂದು ಒಂದು ರೂಪಾಯಿ ಕೊಡಲಿಲ್ಲ ಎಂದರು.

    ಸೋಮಣ್ಣ ಒಂದೇ ಒಂದು ಮನೆ ಬಡವರಿಗೆ ಹಂಚಿಕೆ ಮಾಡಿದ ನಿದರ್ಶನವಿದ್ದರೆ ಹೇಳಲಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಡಪಾಯಿ ಪುಟ್ಟರಂಗಶಟ್ಟಿ ಹಾಗೂ ನನ್ನ ವಿರುದ್ಧ ಸೋತ ಸೋಮಣ್ಣ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ನಿಲ್ಲಿಸಿದ್ದಾರೆ. ಸೋಮಣ್ಣ ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ಒಂದೇ ಒಂದು ಮನೆ ಬಡವರಿಗೆ ಹಂಚಿಕೆ ಮಾಡಿದ ನಿದರ್ಶನವಿದ್ದರೆ ಹೇಳಲಿ ನೋಡೋಣ. ಒಂದು ಮನೆ ಕೊಡಲಿಲ್ಲ. ನಮ್ಮ ಅವಧಿಯಲ್ಲಿ 14.46 ಲಕ್ಷ ಮನೆಗಳನ್ನು ಕಟ್ಟಿಸಿದ್ದೇವೆ. ಸೋಮಣ್ಣ ಒಂದೇ ಒಂದು ಮನೆ ಬಡವರಿಗೆ ಕಟ್ಟಿಸಿದ್ದ ನಿದರ್ಶನವಿದ್ದರೆ ಅದರ ದಾ ಬಡವರ ಮುಂದಿಟ್ಟು ಕೆಲಸಗಾರ ಎಂದು ಹೇಳಲಿ ಎಂದರು.

    ನರೇಂದ್ರ ಮೋದಿ ಅವರ ಮುಂದೆ ನಿಲ್ಲಲು ಧೈರ್ಯ ಇದೆಯೇ?:

    ಸೋಮಣ್ಣನವರನ್ನು ಲೋಕಸಭೆಗೆ ಕಳಿಸಿದರೆ, ನಿಮ್ಮ ಸಮಸ್ಯೆಗಳನ್ನು ಪ್ರಸ್ತಾಪ ಮಾಡುತ್ತಾರೆಯೇ, ನಿಮ್ಮ ಪರವಾಗಿ ಧ್ವನಿ ಎತ್ತುತ್ತಾರೆಯೇ , ನರೇಂದ್ರ ಮೋದಿ ಅವರ ಮುಂದೆ ನಿಲ್ಲಲು ಧೈರ್ಯ ಇದೆಯೇ? ಎಲ್ಲಾ ಸಂಸದರು ನರೇಂದ್ರ ಮೋದಿ ಯವರನ್ನು ಕಂಡರೆ ಗಡ ಗಡ ಎಂದು ನಡುಗುತ್ತಾರೆ. ಇಂಥವರನ್ನು ಲೋಕಸಭೆಗೆ ಕಳಿಸಿದರೆ ಸಮಸ್ಯಗೆ ಪರಿಹಾರ ಸಿಗುವುದೇ ಎಂದು ಪ್ರಶ್ನಿಸಿಕೊಳ್ಳಬೇಕು. 27 ಜನ ಸಂಸದರಿಂದ ಕರ್ನಾಟಕದ ಜನರ ಹಿತವನ್ನು ರಕ್ಷಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸೋಮಣ್ಣ ಅವರನ್ನು ಯಾವ ಕಾರಣಕ್ಕೂ ಬೆಂಬಲಿಸಬಾರದು ಎಂದರು.

    ಬಾಯಿ ಬಿಡದವರನ್ನು ಕಳಿಸಬೇಕೊ ಎಂದು ತೀರ್ಮಾನ ಮಾಡಿ:

    ಮುದ್ದಹನುಮೇಗೌಡರು 2014 ರಿಂದ 2019 ರವರೆಗೆ ಲೋಕಸಭಾ ಸದಸ್ಯರಾಗಿದ್ದರು. ಜನರ ಧ್ವನಿಯಾಗಿ 50 ವರ್ಷಗಳ ಕಾಲ ನಿಮ್ಮ ಧ್ವನಿಯಾಗಿ ಸಮರ್ಥವಾಗಿ ಪ್ರತಿನಿಧಿಸಿದ್ದಾರೆ. ಕೊಬ್ಬರಿ, ರೈತರು ಹಾಗೂ ಎಲ್ಲರ ಸಮಸ್ಯೆಗಳನ್ನು ಪ್ರಸ್ತಾಪಿಸಿ ಕರ್ನಾಟಕದ ಅಭಿವೃದ್ಧಿ ಬಗ್ಗೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ಪರಿಹಾರ ಕೊಡಿಸುವ ಕೆಲಸವನ್ನು ಮುದ್ದಹನುಮೇಗೌಡ ರು ಮಾಡಿದ್ದರು ಎನ್ನುವುದು ಇತಿಹಾಸ. ಇಂಥವರನ್ನು ಕಳಿ ಸಬೇಕೋ ಅಥವಾ ಬಾಯಿ ಬಿಡದವರನ್ನು ಕಳಿಸಬೇಕೊ ಎಂದು ತೀರ್ಮಾನ ಮಾಡಬೇಕು ಎಂದು ಕರೆ ನೀಡಿದರು.

    ಸಮಾನತೆ ಎಲ್ಲರಿಗೂ ದೊರಕಬೇಕು:

    ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವಾದ ಇಂದು ಅವರನ್ನು ಸ್ಮರಿಸಿದ್ದೇವೆ. ಅಂಬೇಡ್ಕರ್ ಅವರು ಹೆಣ್ಣುಮಕ್ಕಳ ಪ್ರಗತಿಯಾಗದೆ ಈ ಸಮಾಜದಲ್ಲಿ ಪ್ರಗತಿ ಸಾಧ್ಯವಿಲ್ಲ. ಅವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಬೇಕು. ರೈತರಿಗೆ, ಹಿಂದುಳಿದವರಿಗೆ, ಅಸಮಾನತೆಯಿಂದ ನರಳುವ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಿದಾಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ. ಸಮಾನತೆಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ನಮ್ಮ ದೇಶದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗೆ ಸರಿಹೊಂದುವ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಸ್ವಾತಂತ್ರ್ಯ, ಸಮಾನತೆ , ಭ್ರಾತೃತ್ವದ ತತ್ವಗಳನ್ನು ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. ಸಮಾನತೆ ಎಲ್ಲರಿಗೂ ದೊರಕಬೇಕು. ಎಲ್ಲಾರೂ ಒಂದು ತಾಯಿಯ ಮಕ್ಕಳಂತೆ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಇದನ್ನೇ ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕೆಂದು ಹೇಳಿದ್ದರು ಎಂದರು.

    ಸಮಾನತೆಯಲ್ಲಿ ನಂಬಿಕೆ ಇಟ್ಟವರು ಕಾಂಗ್ರೆಸ್ ಪಕ್ಷ:

    ಸಮಾನತೆಯಲ್ಲಿ ನಂಬಿಕೆ ಇಟ್ಟವರು ಕಾಂಗ್ರೆಸ್ ಪಕ್ಷ. ಈ ದೇಶದ ಸಂಪತ್ತು, ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕು. ಕೆಲವರ ಕೈಯಲ್ಲೇ ಅಧಿಕಾರವಿರಬಾರದು. ದೇಶದ ಅಧಿಕಾರ ಬಲಾಢ್ಯರ ಕೈಯಲ್ಲಿ ಸಿಲುಕಿದರೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ. ದೌರ್ಜನ್ಯ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ರಾಜಕೀಯ ಸ್ವಾತಂತ್ಯ ಸಿಕ್ಕರೆ ಸಾಲದು ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸಮಸಾಮಾಜ ನಿರ್ಮಾಣ ಸಾಧ್ಯ ಎಂದು ಅಂಬೇಡ್ಕರ್ ಹೇಳಿದ್ದಾರೆ. ಅವರ ಆದರ್ಶ, ತತ್ವ ಹಾಗೂ ಧ್ಯೇ ಯೋದ್ದೇಶಗಳನ್ನು ಈಡೇರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.

    ನುಡಿದಂತೆ ನಡೆದಿದ್ದೇವೆ:

    ನಾವು ಹಿಂದೆ ಅಧಿಕಾರದಲ್ಲಿದ್ದಾಗ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ಜೊತೆಗೆ 30 ಕಾರ್ಯಕ್ರಮಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ.

    ಈ ಬಾರಿ ನಾನು ಮತ್ತು ಡಿ.ಕೆ. ಶಿವಕುಮಾರ್ ಅವರು 50 ಗ್ಯಾರಂಟಿ ಗಳಿಗೆ ಸಹಿ ಮಾಡಿ ಕೊಟ್ಟಿ ದ್ದೆವು. ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿ ಇದನ್ನು ಟೀಕಿಸಿತ್ತು. ಅಭಿವೃದ್ಧಿಗೆ ಹಣವಿರುವುದಿಲ್ಲ ಎಂದರು.

    ಗ್ಯಾರಂಟಿ ಪದವನ್ನು ಮೋದಿ ಕದ್ದಿದ್ದಾರೆ:

    ಕರ್ನಾಟಕದಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ, ಅವುಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಮೂದಲಿಸಿದ್ದ ಪ್ರಧಾನಿ ಮೋದಿಯವರೇ ಇಂದು ಗ್ಯಾರಂಟಿ ಎಂಬ ಪದವನ್ನು ಕದ್ದಿದ್ದು, ಈಗ ಎಲ್ಲಿ ಭಾಷಣ ಮಾಡಿದರೂ ‘ಮೋದಿ ಗ್ಯಾರಂಟಿ’ ಎನ್ನುತ್ತಾರೆ ಎಂದರು.

    ಪ್ರಧಾನಿ ಮೋದಿ ಜನರ ಮೂಲಭೂತ ಸಮಸ್ಯೆಗಳನ್ನು ನಿವಾರಿಸಿಲ್ಲ:

    ಪ್ರತಿ ಜನರ ಖಾತೆಗೆ 15 ಕೋಟಿ, 2 ಕೋಟಿ ಉದ್ಯೋಗ ಸೃಷ್ಟಿ ಭರವಸೆಗಳನ್ನು ಹುಸಿಗೊಳಿಸಿದ್ದು, ಪೆಟ್ರೋಲ್ ಡೀಸೆಲ್ , ಗ್ಯಾಸ್ ಸೇರಿದಂತೆ ಎಲ್ಲ ಪದಾರ್ಥಗಳ ಬೆಲೆಗಳು ಇಳಿದೇ ಇಲ್ಲ. ತಮ್ಮ ಹತ್ತು ವರ್ಷದ ಅಧಿಕಾರವಾಧಿಯಲ್ಲಿ ಜನರ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ಮೋದಿಯವರಿಗೆ ಸಾಧ್ಯವಾಗದೇ, ಯಾವ ಮುಖವಿಟ್ಟುಕೊಂಡು ಜನರ ಬಳಿ ಓಟು ಕೇಳಲು ಬರುತ್ತೀರಿ ಎಂದು ಸಿಎಂ ಪ್ರಶ್ನಿಸಿದರು.

    ಮುದ್ದೇಹನುಮಗೌಡರು ಪ್ರಾಮಾಣಿಕ ವ್ಯಕ್ತಿ:

    ಬಿಜೆಪಿಯವರ ಮನೆದೇವರೇ ಸುಳ್ಳು. 2019 ರಿಂದ 2023ರವರೆಗೆ ಬಿಜೆಪಿಯ ಸರ್ಕಾರ ಕೇವಲ ಲೂಟಿ ಮಾಡಿದ್ದಾರೆ. ಬಡವರಿಗೆ ಮನೆ ಕಟ್ಟಿಕೊಡಲು ವಿಫಲವಾದ ಬಿಜೆಪಿಯ ವಿ.ಸೋಮಣ್ಣ ಲೋಕಸಭೆಯಲ್ಲಿ ಏನು ಮಾಡುತ್ತಾರೆ. ಮುದ್ದುಹನುಮೇಗೌಡರು ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಹಿಂದುಳಿದ, ದಲಿತರ, ರೈತರ ಹಾಗೂ ಬಡವರ ಪರ ನಾಯಕರಾಗಿದ್ದಾರೆ. ರಾಜ್ಯದ ಧ್ವನಿಯಾಗಿ ಲೋಕಸಭೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುವ ಮುದ್ದೇಹನುಮಗೌಡರಿಗೆ ಜನರ ಗೆಲ್ಲಿಸಬೇಕೆಂದು ಕೋರಿದರು.

    ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಮಾಜಿ ಶಾಸಕರು, ಷಡಕ್ಷರಿ, ವಾಸು, ರಾಜೇಂದ್ರ, ಮೊದಲಾದವರು ಉಪಸ್ಥಿರಿದ್ದರು.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

    ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


    Provided by
    Provided by
    admin
    • Website

    Related Posts

    ತುಮಕೂರು: ಬಂಟ್ವಾಳದಲ್ಲಿ ನಡೆದ ಯುವತಿಯ ಭೀಕರ ಹತ್ಯೆಗೆ ಮಹಿಳಾ ಸಾಂಸ್ಕೃತಿಕ ಸಂಘಟನೆ ಖಂಡನೆ

    July 20, 2026

    ಸಂಕಷ್ಟದಲ್ಲೂ ಕೈಬಿಡದ ಸಂಗಾತಿ: ದೇವೇಗೌಡರ 72 ವರ್ಷಗಳ ಪಯಣಕ್ಕೆ ನೆರಲಾಗಿದ್ದ ಚೆನ್ನಮ್ಮ

    July 19, 2026

    ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು

    July 18, 2026

    Comments are closed.

    Our Picks

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ

    July 22, 2026

    ತುಮಕೂರು: ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಗಂಗಹನುಮಯ್ಯ ಅವರ ಧರ್ಮಪತ್ನಿ, ಹಿರಿಯ ಪತ್ರಕರ್ತೆ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ…

    ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ

    July 22, 2026

    ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್‌ ಬುಕ್ ವಿತರಣೆ

    July 22, 2026

    ಪ.ಪಂ. ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಅವರ 63ನೇ ಜನ್ಮದಿನಾಚರಣೆ

    July 22, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.