ರಸ್ತೆ ಅಪಘಾತಗಳ ಸಂಖ್ಯೆಯನ್ನು ತಗ್ಗಿಸಲು ಉತ್ತರ ಪ್ರದೇಶ ಸಾರಿಗೆ ಇಲಾಖೆಯು ಹೊಸ ಕಾರ್ಯತಂತ್ರವೊಂದನ್ನು ರೂಪಿಸಿದೆ ಎಂದು ವರದಿ ತಿಳಿಸಿದೆ. “ವಾಣಿಜ್ಯ ವಾಹನಗಳು ಹಾಗೂ ರಾಜ್ಯ ಸಾರಿಗೆ ಬಸ್ ಗಳ ಚಾಲಕರು ತಮ್ಮ ಕುಟುಂಬದ ಫೋಟೊವನ್ನು ಡ್ಯಾಶ್ ಬೋರ್ಡ್ ಮೇಲೆ ಇರಿಸಿ”ಕೊಳ್ಳುವಂತೆ ರಾಜ್ಯ ಸಾರಿಗೆ ಆಯುಕ್ತ ಚಂದ್ರ ಭೂಷಣ್ ಸಿಂಗ್ ಮನವಿ ಮಾಡಿದ್ದಾರೆ.
ಚಾಲಕರು ತಮ್ಮ ಕುಟುಂಬದ ಫೋಟೊಗಳನ್ನು ಪ್ರದರ್ಶಿಸುವ ಉಪಾಯವನ್ನು ಆಂಧ್ರಪ್ರದೇಶದಿಂದ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಚಾಲಕರು ತಮ್ಮ ಮುಂದೆ ತಮ್ಮ ಕುಟುಂಬದ ಫೋಟೊ ಪ್ರದರ್ಶಿಸುವಂತೆ ಮಾಡುವ ಈ ವಿನೂತನ ಉಪಾಯವು ಚಾಲಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಭಾವನಾತ್ಮಕ ಸಂವೇದನೆಯನ್ನು ರೂಪಿಸುವ ಗುರಿ ಹೊಂದಿದೆ ಎಂದು ಇಲಾಖೆಯ ಅಧಿಕಾರಿ ಹೇಳಿದ್ದಾರೆ. ಸಾರಿಗೆ ಆಯುಕ್ತರ ಪ್ರಕಾರ, ಈ ಕ್ರಮದಿಂದ ಆಂಧ್ರಪ್ರದೇಶದಲ್ಲಿ ಯಶಸ್ವಿಯಾಗಿ ರಸ್ತೆ ಅಪಘಾತ ಪ್ರಮಾಣವನ್ನು ತಗ್ಗಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


