ಸ್ಯಾಂಡಲ್ ವುಡ್ ನ ನಟ-ನಿರ್ದೇಶಕ ನಿರೂಪಕ ಮಾಸ್ಟರ್ ಆನಂದ್ ಅವರ ಮಗಳ ಮೊದಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದು ಮಕ್ಕಳ ಸಿನಿಮಾ ಅಲ್ಲ. ಹಾರರ್ ಕಥಾಹಂದರವಿರುವ ಸಿನಿಮಾ. ಈ ಸಿನಿಮಾದಲ್ಲಿ ಹೊಸಬರು ಸೇರಿದಂತೆ ಖ್ಯಾತ ನಟಿ ರಚನಾ ಇಂದರ್ ಅವರು ಇದ್ದಾರೆ.
ಯುವ ನಟ ಗೌತಮ್ ಆರ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ನಾಲ್ಕನೇ ಆಯಾಮ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅರುಣ್ ಛಾಯಾಗ್ರಹಣ, ಉಗ್ರಂ ಶ್ರೀಕಾಂತ್ ಸಂಕಲನವಿದೆ. ಟ್ರೇಲರ್ ಹಾಡುಗಳ ಮೂಲಕ ಭಾರೀ ನಿರೀಕ್ಷೆಯನ್ನು ಮೂಡಿಸಿರುವ ಈ ಸಿನಿಮಾ ರಾಜ್ಯಾದ್ಯಂತ ಎ.19 ರಂದು ಬಿಡುಗಡೆಯಾಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


