ಪ್ರತಿದಿನ ಪಾಲಕ್ ಜ್ಯೂಸ್ ಕುಡಿಯುವುದರ ಪ್ರಯೋಜನಗಳು:
ಬೆಳಗಿನ ಹೊತ್ತಿಗೆ ಹಲವು ರೀತಿಯ ಹಸಿರು ಜ್ಯೂಸ್ ಗಳನ್ನು ಕುಡಿದರೆ ಆರೋಗ್ಯಕ್ಕೆ ಒಳಿತು. ಅಂಥದ್ದೇ ಹಸಿರು ಜ್ಯೂಸ್ ಗಳ ಪೈಕಿ ಒಂದು ಪಾಲಕ್ ಸೊಪ್ಪಿನದ್ದು. ರುಚಿಗೆ ಬೇಕಿದ್ದರೆ ಶುಂಠಿ, ನಿಂಬೆ ರಸಗಳನ್ನೆಲ್ಲ ಬೆರೆಸಿಕೊಂಡರೆ ಹಸಿರು ಜ್ಯೂಸ್ ಗಳು ಬಾಯಿಗೂ ರುಚಿ ದೇಹಕ್ಕೂ ಹಿತ ನೀಡುತ್ತದೆ. ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಕ್ಯಾಲ್ಸಿಯಂನಂಥ ಅಗತ್ಯ ಖನಿಜಗಳು, ಎ, ಸಿ, ಇ ನಂಥ ಮಹತ್ವದ ಜೀವಸತ್ವಗಳನ್ನು ಒಳಗೊಂಡ ಈ ಸೊಪ್ಪಿನಲ್ಲಿ ನಾರು ಸಹ ಹೇರಳವಾಗಿದೆ.
ತುಳಸಿಯಲ್ಲಿದೆ ಹಲವು ಔಷಧೀಯ ಗುಣಗಳು…!
ತುಳಸಿಯಲ್ಲಿ ಅನೇಕ ಔಷಧೀಯ ಗುಣಗಳಿವೆ. ತುಳಸಿಯನ್ನು ಆಹಾರ ರೂಪದಲ್ಲಿ ಸೇವಿಸಿದರೆ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಬೆಳಗ್ಗೆ ಮಾಡುವ ಚಹಾಗೆ ತುಳಸಿಯ ತಾಜಾ ಎಲೆಗಳನ್ನು ಹಾಕಿ ಬಿಸಿ ಬಿಸಿಯಾಗಿ ಕುಡಿದರೆ ನೆಗಡಿ ಹಾಗೂ ಕಟ್ಟಿದ ಮೂಗು ಸರಾಗವಾಗುತ್ತದೆ. ತುಳಸಿಯ ಪಾನಕ ಮಾಡಿ ಸಹ ಕುಡಿಯಬಹುದು. ಇತರ ಹಣ್ಣಿನ ಜ್ಯೂಸ್ ಗಳಿಗೆ ತುಳಸಿಯ ಎಲೆಗಳನ್ನು ಬೆರೆಸಿ ಕುಡಿಯಬಹುದು. ತುಳಸಿ ಎಲೆಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನಿಷಿಯಂ ಮುಂತಾದ ಪೋಷಕಾಂಶಗಳಿದ್ದು, ಇದನ್ನು ಅನ್ನಕ್ಕೂ ಬೆರೆಸಿ ತಿನ್ನಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296