ರಾಯಚೂರು: ರಾಯಚೂರಿನ ಸಿಂಧನೂರು ತಾಲೂಕಿನ ದಿದ್ದಿಗಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಂಡ-ಹೆಂಡತಿ ನಡುವೆ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ಸಿಟ್ಟಿನಿಂದ ಪತ್ನಿಯನ್ನು ಕೊಂದು ಪತಿಯೂ ನೇಣಿಗೆ ಶರಣಾಗಿದ್ದಾನೆ. ಕವಿತಾ(26) ಕೊಲೆಯಾದವಳು. ಭೀಮಣ್ಣ(28) ಎಂಬಾತ ಪತ್ನಿಯನ್ನು ಕೊಂದು ನೇಣಿಗೆ ಶರಣಾದ ಆರೋಪಿ ಪತಿಯಾಗಿದ್ದಾನೆ.
ಕವಿತಾ ಹಾಗೂ ಭೀಮಣ್ಣ ಇಬ್ಬರಿಗೂ ಮದುವೆಯಾಗಿ ಒಂದು ವರ್ಷ ಆಗಿತ್ತು. ಈ ದಂಪತಿ ಮೊದಲು ಖುಷಿಯಾಗಿಯೇ ಇದ್ದರು. ಆದರೆ ಇತ್ತೀಚೆಗೆ ಭೀಮಣ್ಣನಿಗೆ ಕವಿತಾಳ ಮೇಲೆ ಅನುಮಾನದ ಭೂತ ಅಂಟಿಕೊಂಡಿತ್ತು. ಆಕೆಯ ಶೀಲವನ್ನು ಶಂಕಿಸಿ ಪತ್ನಿ ಜತೆ ಜಗಳ ಮಾಡುತ್ತಿದ್ದ.
ಇದೇ ವಿಚಾರಕ್ಕೆ ಗುರುವಾರ ಗಲಾಟೆ ನಡೆದಿದ್ದು, ಕುಪಿತಗೊಂಡು ಭೀಮಣ್ಣನ ಕಲ್ಲಿನಿಂದ ಕವಿತಾಳನ್ನು ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆಕೆ ಮೃತಪಟ್ಟ ಕೂಡಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಳಗಾನೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


