ಪಾವಗಡ ಸುದ್ದಿ: ಪಾವಗಡ ಪಟ್ಟಣದಲ್ಲಿರುವ ಪಕ್ಷದ ಕಚೇರಿಗೆ ಇಂದು, ಕರ್ನಾಟಕ ಸರ್ಕಾರದ ಗೃಹಮಂತ್ರಿಗಳಾದ ಡಾ.ಜಿ. ಪರಮೇಶ್ವರ್ ರವರು ಭೇಟಿ ನೀಡಿದರು. ಮಾನ್ಯ ಶಾಸಕರಾದ ಹೆಚ್.ವಿ. ವೆಂಕಟೇಶ್ ರವರು, ಮಾಜಿ ಸಚಿವರಾದ ವೆಂಕಟರಮಣಪ್ಪ ನವರನ್ನು ಭೇಟಿ ಮಾಡಿ, ಚುನಾವಣಾ ತಯಾರಿಯ ಬಗ್ಗೆ ಮಾಹಿತಿ ಪಡೆದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಚಂದ್ರಪ್ಪ ನವರಿಗೆ ಈ ತಾಲ್ಲೂಕಿನಿಂದ ಅತೀ ಹೆಚ್ಚು ಮತಗಳನ್ನು ಕೊಡಿಸಿ ಗೆಲ್ಲಿಸಿಕೊಂಡು ಬರಬೇಕೆಂದು ಮಾನ್ಯ ಶಾಸಕರಲ್ಲಿ ಮನವಿ ಮಾಡಿದರು.
ಈ ವೇಳೆ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಗೌಡ ರವರು, ಕೆಪಿಸಿಸಿ ಉಪಾಧ್ಯಕ್ಷ ಮುರುಳಿಧರ ಹಾಲಪ್ಪ ನವರು, ವಕ್ತಾರರಾದ ನಿಕೇತ್ ರಾಜ್ ಮೌರ್ಯ ರವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುದೇಶ್ ಬಾಬು ರವರು, ರಾಮಾಂಜಿನಪ್ಪ ನವರು, ಮಾಜಿ ಜಿ.ಪಂ. ಸದಸ್ಯರಾದ ಫಜುಲುಲ್ಲ ಸಾಬ್ ರವರು, ಪುರಸಭಾ ಮಾಜಿ ಅಧ್ಯಕ್ಷರಾದ ಗುರ್ರಪ್ಪ ನವರು, ಕೆಪಿಸಿಸಿ ಸದಸ್ಯರಾದ ಕೆ.ಎಸ್. ಪಾಪಣ್ಣ ನವರು, ಶಂಕರ್ ರೆಡ್ಡಿ ರವರು, ಸದಸ್ಯರಾದ ರವಿ ರವರು ಸೇರಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ವರದಿ: ರಾಮಪ್ಪ ಸಿ ಕೆ ಪುರ ಪಾವಗಡ ತಾಲ್ಲೂಕು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


