ಹುಲಿ ದಾಳಿಯಿಂದ ಮರಿ ಆನೆ ಸಾವಿಗೀಡಾದ ಘಟನೆ ಬಂಡೀಪುರ ಅರಣ್ಯದಲ್ಲಿ ನಡೆದಿದೆ. ಇನ್ನು ತಾಯಿ ಆನೆಯು ಸಾವನ್ನಪ್ಪಿದ ಮರಿ ಆನೆಯ ಶವ ಬಿಟ್ಟು ಕದಲದೇ ಕಾದು ಕುಳಿತಿದ್ದು, ಈ ದೃಶ್ಯ ಮನಕಲಕುವಂತಿದೆ.
ಈ ಘಟನೆ ಎಪ್ರಿಲ್ 20ರ ಮಧ್ಯಾಹ್ನದ ವೇಳೆಗೆ ನಡೆದಿದೆ. ಹೆತ್ತವರಿಗೆ ಹೆಗ್ಗಣವು ಮುದ್ದು ಎಂಬಂತೆ, ಪ್ರಾಣಿಗಳು ಕೂಡ ತಮ್ಮ ಮರಿಗಳ ರಕ್ಷಣೆ ಮಾಡುತ್ತವೆ.
ಇನ್ನು ಇದೀಗ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿ ದಾಳಿಯಿಂದ ಮರಿ ಆನೆ ಸಾವನ್ನಪ್ಪಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ತಾಯಿ ಆನೆ ತನ್ನ ಮರಿಯ ಶವವನ್ನು ಬಿಟ್ಟು ಕದಲದೆ ಕಣ್ಣೀರಾಕುತ್ತಾ ಕುಳಿತಿರುವ ಮನಕಲಕುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಇನ್ನು ಇದನ್ನು ಕಂಡ ಸಾವಿರಾರು ಪ್ರಯಾಣಿಕರು, ಅಲ್ಲಿ ನೆರೆದಿದ್ದ ಜನರು ಕೂಡ ಕಣ್ಣಿರಿಟ್ಟ ಘಟನೆ ನಡೆದಿದೆ. ಮತ್ತೊಂದೆಡೆ ರಸ್ತೆ ಪಕ್ಕದಲ್ಲೇ ಆನೆ ಮರಿ ಸಾವನ್ನಪ್ಪಿರುವ ಹಿನ್ನೆಲೆ ಬಂಡೀಪುರ ಅರಣ್ಯ ವ್ಯಾಪ್ತಿಯ ಮೈಸೂರು ಊಟಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನಗಳು ಕಿಲೋಮೀಟರ್ ಗಟ್ಟಲೇ ಸಾಲುಗಟ್ಟಿ ನಿಂತಿದ್ದವು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


