ತುಮಕೂರು: ಬಿಜೆಪಿಯವರು ನೇಹಾ ವಿಚಾರವನ್ನ ರಾಜಕೀಯಕ್ಕೆ ತಿರುಗಿಸಿದ್ದಾರೆ. ನನ್ನ ಮಾತಿನಿಂದ ಹೆಣ್ಣು ಮಗುವಿನ ತಂದೆಗೆ ನೋವಾಗಿದ್ರೆ ನಾನು ವಿಷಾಧಿಸುತ್ತೇನೆ ಎಂದು ಹೇಳಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ನನ್ನ ಹಾಗೂ ಮುಖ್ಯಮಂತ್ರಿ ಹೇಳಿಕೆಯನ್ನ ಕಟುವಾಗಿ ಟೀಕೆ ಮಾಡ್ತಾ ಇದ್ದಾರೆ. ಅದು ಅವರ ಸಂಸ್ಕೃತಿಯನ್ನ ತೋರಿಸುತ್ತೆ ಎಂದರು.
ಅವರಿಗೆ ಬಹಳ ನಿರಾಸೆಯಾಗಿದೆ. ಹಾಗಾಗಿ ಈ ಘಟನೆ ರಾಜಕೀಯಕ್ಕೆ ತರುತ್ತಿದ್ದಾರೆ. ಸರ್ಕಾರ ಈ ಘಟನೆಯನ್ನು ಸಿಓಡಿಗೆ ಕೊಡೋಕೆ ತೀರ್ಮಾನ ಮಾಡಿದೆ ಎಂದರು.
ಮುಖ್ಯಮಂತ್ರಿ ಅವರು ಹಾಗೂ ನಾನು ತೀರ್ಮಾನ ಮಾಡಿ ಆದೇಶ ನೀಡಿದ್ದೇವೆ. ಸಿಓಡಿ ಟೀಂ ಇವತ್ತು ಹುಬ್ಬಳ್ಳಿ ಹೋಗಿ ಟೇಕ್ ಓವರ್ ಮಾಡ್ತಾರೆ ಎಂದರು. ಅವರ ತಂದೆ ಇನ್ನೂ ನಾಲ್ಕು ಜನ ಕೊಲೆ ಹಿಂದೆ ಇದ್ದಾರೆ ಎಂದು ಹೇಳಿದ್ದಾರೆ. ಏನೇ ಇದ್ರು ಸಿಓಡಿ ಅವರು ಹತ್ತು ದಿನದ ಒಳಗೆ ವರದಿ ಕೊಡುವಂತೆ ಹೇಳಿದೆ. ಆದೇಶ ಈಗಾಗಲೇ ಹೊರಡಿಸಿದೆ. ತಂದೆ ತಾಯಿಗಳಿಗೆ ನ್ಯಾಯ ಸಿಗುತ್ತೆ ಸತ್ಯ ಹೊರಬರುತ್ತೆ ಆ ಪ್ರಕಾರ ತನಿಖೆ ನಡೆಯುತ್ತೆ ಎಂದರು.
ನಾಳೆ ಮುಖ್ಯಮಂತ್ರಿ ಹಾಗೂ ಡಿ.ಕೆ.ಶಿವಕುಮಾರ್ ನಮ್ಮೂರಿಗೆ ಬರೋರಿದ್ದಾರೆ. ಚಿತ್ರದುರ್ಗಕ್ಕೆ ಪ್ರಿಯಾಂಕ ವಾದ್ರಾ ಬರ್ತಾರೆ, ಯಲ್ಲಾಪುರದಲ್ಲಿ ಸಭೆಯನ್ನ ಆಯೋಜನೆ ಮಾಡಿದ್ದೇವೆ ಎಂದರು.
40 ರಿಂದ 50 ಸಾವಿರ ಜನ ಬರುವ ನಿರೀಕ್ಷೆ ಇದೆ. ತುಮಕೂರು, ಗ್ರಾಮಾಂತರ ಮಧುಗಿರಿ, ಕುಣಿಗಲ್ ನವರು ಬಂದು ಸೇರುತ್ತಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


