ಬೀದರ್: ಬಿಜೆಪಿ ಪಕ್ಷದ ವಿರೂಪಾಕ್ಷ ಗಾದಗಿಯವರು, ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಅವಹೇಳನಾಕಾರಿ ಪದ ಬಳಸಿ ಅಶ್ಲೀಲವಾಗಿ ನಿಂದಿಸಿದ್ದು, ಅವರ ವಿರುದ್ಧ ತುಮಕೂರು ಪೋಲಿಸ್ ವರಿಷ್ಠಾಧಿಕಾರಿ ಗೆ ದೂರು ನೀಡಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ತಿಳಿಸಿದ್ದಾರೆ.
ಕೊರಟಗೆರೆಯ ರಾಜೀವ್ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರಟಗೆರೆ ತಾಲೂಕಿನ ಡಾ.ಜಿ.ಪರಮೇಶ್ವರ್ ರವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಮುಖಂಡರೆಲ್ಲರೂ ಒಟ್ಟಾಗಿ ವಿರೂಪಾಕ್ಷ ಗಾದಗಿ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಪೋಲಿಸ್ ವರಿಷ್ಠಾಧಿಕಾರಿ ಗೆ ದೂರು ನೀಡಿದ್ದೇವೆ ಎಂದು ತಿಳಿಸಿದರು.
ಬೀದರ್ ನಲ್ಲಿ ವೈಯಕ್ತಿಕವಾಗಿ ಪರಮೇಶ್ವರ್ ರನ್ನುನಿಂದನೆ ಮಾಡಿದ್ದಾರೆ. ಇದರಿಂದ ಅವರ ಅಭಿಮಾನಿಗಳಿಗೆ ಬಹಳ ನೋವಾಗಿದೆ. ವಿರೂಪಾಕ್ಷ ಒಬ್ಬ ಗೂಂಡಾ. ಅವನ ಮೇಲೆ ಸುಮಾರು ಪ್ರಕರಣಗಳು ದಾಖಲಾಗಿದೆ. ಅವನು ಕನ್ನಡ ಪರ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದರು. ಪರಮೇಶ್ವರ್ ರವರು, ಸೌಮ್ಯ ಸ್ವಭಾವದ ವ್ಯಕ್ತಿ. ಆದರೆ ಅವರ ಅಭಿಮಾನಿಗಳು ಹಾಗಲ್ಲ. ನಮಗೂ ಸಹ ಮಾತನಾಡಲು ಬರುತ್ತದೆ. ರಾಜಕೀಯ ಮಾಡು. ಅದನ್ನು ಬಿಟ್ಟು ಇದೆಲ್ಲ ಮತ್ತೊಮ್ಮೆ ಮಾತಾಡಿದರೆ ಪರಿಣಾಮ ಸರಿ ಇರಲ್ಲ ಎಂದು ಎಚ್ಚರಿಸಿದರು.
ನೇಹಾಳ ಹತ್ಯೆ ಪ್ರಕರಣ ಮುಂದೆ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಾಚಿಕೆ ಆಗಬೇಕು ಬಿಜೆಪಿ ಪಕ್ಷದ ನಾಯಕರಿಗೆ. ದೊಡ್ಡಗುಣೆ ಹತ್ತಿರ ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ವೇಲಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಅಲ್ಲೇ ಸುಟ್ಟು ಹಾಕಿದ್ದ. ಆ ಕೊಲೆಯಾದ ಮುಸ್ಲಿಂ ಹುಡುಗಿಯ ಮನೆಗೆ ಆರ್. ಅಶೋಕ್, ವಿಜಯೇಂದ್ರ, ಯತ್ನಾಳ್ ಸೇರಿದಂತೆ ಬಿಜೆಪಿ ಪಕ್ಷದವರು ಯಾಕೆ ಭೇಟಿ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್. ಅಶೋಕ್ ತುಮಕೂರಿನಲ್ಲಿ ಮಾತನಾಡಿ, ಕಾಂಗ್ರೆಸ್ ನವರು ಲವ್ ಜಿಹಾದ್ ಟ್ರೈನಿಂಗ್ ಕೊಟ್ಟು ಕಳಿಸಿದ್ದಾರೆ ಎಂದು ಹೇಳಿದ್ದಾರೆ. ಈ ತರಹದ ರಾಜಕೀಯ ನಮ್ಮ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ವಿರೂಪಾಕ್ಷ ಹೇಳಿದಾಗ, ಚಪ್ಪಾಳೆ ತಟ್ಟಿದರು. ನಾಚಿಕೆ ಆಗಬೇಕು ಇವರಿಗೆ. ಇದು ಬಿಜೆಪಿ ಸಂಸ್ಕ್ರತಿ.ಅದನ್ನು ಬಿಟ್ಟು ಬಹಿರಂಗವಾಗಿ ನೀವು ಕ್ಷಮೆ ಕೇಳಬೇಕು. ಬಿಜೆಪಿ ಪಕ್ಷದ ನಾಯಕರು ಕೇವಲ ಮುಸ್ಲಿಂ ಸಮುದಾಯದ ಬಗ್ಗೆ ಮಾತಾಡುತ್ತಿದ್ದೀರಾ. ಯಾಕೆ ಅವರು ಮನುಷ್ಯರಲ್ಲವೆ. ಅವರು ಭಾರತದ ಪ್ರಜೆಗಳು ಅಲ್ಲವೆ. ರಾಜಕೀಯ ರಾಜಕೀಯವನ್ನಾಗಿ ಮಾಡಿ. ಸಾವಿನ ಮನೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದು ಬಿಜೆಪಿ ಸಂಸ್ಕ್ರತಿ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಗರ ಬ್ಲಾಕ್ ಅಧ್ಯಕ್ಷ ಅಶ್ವಥ್ ನಾರಾಯಣ್, ಮಹಿಳಾ ಸಂಘದ ಅಧ್ಯಕ್ಷೆ ಜಯಮ್ಮ, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


