ತುಮಕೂರು: ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣ ತುಂಬ ಚೆನ್ನಾಗಿದೆ. ನಾನು ಇವತ್ತು ಶಿವಮೊಗ್ಗಕ್ಕೆ ಹೋಗಿ, ನಂತರ ಬೀದರ್ ಕಡೆಗೆ ಹೋಗ್ತೀನಿ. ಎಲ್ಲಾ ಕಡೆ ನಿರೀಕ್ಷೆ ಮೀರಿ ಜನ ಬೆಂಬಲ ಸಿಗ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ತಿಪಟೂರಿನಲ್ಲಿ ವಿ. ಸೋಮಣ್ಣ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೋದಿ ಮತ್ತೆ ಅಮಿತ್ ಷಾ ಗಾಳಿ ಎಲ್ಲಾ ಕಡೆ ಬೀಸ್ತಿದೆ. ಇದೆಲ್ಲದರ ಆಧಾರದ ಮೇಲೆ ಹೇಳ್ತಿನಿ, ಸೋಮಣ್ಣನವರು ಬಹಳ ಅಂತರದಿಂದ ಗೆಲ್ತಾರೆ ಎಂದರು. ತುಮಕೂರಿನಲ್ಲಿ ಸೋಮಣ್ಣ ಅವರು, ಬಹಳ ಅಂತರದಿಂದ ಗೆಲ್ತಾರೆ. ಎಷ್ಟು ಲಕ್ಷ ಅಂತರದಲ್ಲಿ ಗೆಲ್ತಾರೆ ಅನ್ನೋದನ್ನ ಕಾದು ನೋಡಬೇಕು ಎಂದರು.
ರಾಜ್ಯದಲ್ಲಿ 28 ಕ್ಕೆ 28 ನಾವು ಗೆಲ್ತೀವಿ. ಕುಮಾರಸ್ವಾಮಿ ಪರ ಸುಮಲತಾ ಪ್ರಚಾರಕ್ಕೆ ಹೋಗದ ವಿಚಾರದಲ್ಲಿ, ಕುಮಾರಸ್ವಾಮಿ ಪರ ಸುಮಲತಾರನ್ನ ಪ್ರಚಾರಕ್ಕೆ ಕರೆದರೆ ಹೋಗ್ತಿನಿ ಅಂತ ಸುಮಲತಾ ಹೇಳಿದ್ದಾರೆ. ಸುಮಲತಾ ಪ್ರಚಾರಕ್ಕೆ ಹೋಗ್ತಾರೆ ಎಂದರು.
ದೇವೇಗೌಡರ ಮತ್ತು ಪ್ರಧಾನಿ ಅವರ ಸಂಬಂಧ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಆಗಿರೋದ್ರಿಂದ, ಬಹಳ ದೊಡ್ಡ ಅಂತರದಿಂದ ಎಲ್ಲಾ ಗೆಲ್ತೀವಿ ಎಂದರು.
ಕಾಂಗ್ರೆಸ್ ನವರು ಏನ್ ಬೇಕು ಅದನ್ನ ಮಾತಾಡ್ತಿದ್ದಾರೆ. ಫಲಿತಾಂಶ ಬಂದ ಮೇಲೆ ಅವರಿಗೆ ಅರ್ಥ ಆಗುತ್ತೆ. ಕಾಂಗ್ರೆಸ್ ನವರಿಗೆ ತಮ್ಮ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಅಂತ ಹೆಸರು ಹೇಳಲಿ ಅಂತ ಕೇಳಿದೀನಿ ಎಂದರು.
ಇಲ್ಲಿಯವರೆಗೂ ಇವತ್ತಿನವರೆಗೂ ಅವರಿಗೆ ಹೇಳೋಕೆ ಆಗಿಲ್ಲ. ಕಾಂಗ್ರೆಸ್ ನವರ ಸೋಲು ಖಚಿತ. ಸಂವಿಧಾನ ಬದಲಾವಣೆ ಮಾಡ್ತಾರೆ ಎಂಬ ದಲಿತಕೆರಿಯಲ್ಲಿ ಪ್ರಚಾರ ವಿಚಾರದ ಬಗ್ಗೆ, ಅದು ಹುಚ್ಚುತನದ ಪ್ರಚಾರ. ಸಂವಿಧಾನವನ್ನ ಯಾರು ಟಚ್ ಮಾಡೋಕೆ ಆಗಲ್ಲ. ಅಂಬೇಡ್ಕರ್ ಮಾಡಿರೋದು ಪವಿತ್ರವಾದ ಸಂವಿಧಾನ ಎಂದರು. ಅದನ್ನ ಉಳಿಸಿಕೊಂಡು ಹೋಗಬೇಕಾಗಿದೆ. ಇದೇ ಮಾತನ್ನ ಮೋದಿಯವರು ಹೇಳಿದ್ದಾರೆ. ಸುಳ್ಳು ಅಪಪ್ರಚಾರ ಮಾಡಿದ್ರೆ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದರು.
ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಪ್ರಧಾನಿ ಆಗ್ಬಹದು ಎಂಬ ರಾಹುಲ್ ಗಾಂಧಿ ಹೇಳಿಕೆಯ ವಿಚಾರದ ಬಗ್ಗೆ, ಆಯ್ತು .. ಆಯ್ತು… ಮಾಡಲಿ ನೋಡೋಣಾ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


