ನಟಿ ಅಮೂಲ್ಯವ ಅವರ ಮಾವನ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ ಘಟನೆಯೊಂದು ನಡೆದಿದೆ. ಆರ್.ಆರ್. ನಗರದಲ್ಲಿರುವ ಮನೆ ಮೇಲೆ ಅಧಿಕಾರಿಗಳು ಶೋಧ ಮಾಡಿದ್ದಾರೆ. ಈ ಸಮಯದಲ್ಲಿ ರಾಮಚಂದ್ರಪ್ಪ ಅವರ ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತು ಅಥವಾ ಹಣ ಪತ್ತೆಯಾಗಿಲ್ಲ.
ಮನೆಯಲ್ಲಿ ಫಂಕ್ಷನ್ ಎಂದು ಸಂಗ್ರಹಿಸಿದ್ದ 31 ಲೀಟರ್ ಮದ್ಯವನ್ನು ಅಧಿಕಾರಿಗಳು ವಶಪಡಿಸಿದ್ದಾರೆ. ಕಾಂಗ್ರೆಸ್ ನವರು ಈ ಭಾಗದಲ್ಲಿ ಹಣ ಹಂಚಿಕೆ ಮಾಡುತ್ತಿದ್ದರು. ಅದಕ್ಕೆ ನಾವು ಅಡ್ಡಿಪಡಿಸುತ್ತೇವೆ ಎಂದು ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ. ದಾಳಿ ಸಂದರ್ಭ ಆರ್‌ಓ ಗೆ ಪದೇ ಪದೇ ಫೋನ್ ಬರ್ತಾನೆ ಇತ್ತು. ಎರಡು ದಿನಕ್ಕಾದರೂ ಒಳಕ್ಕೆ ಹಾಕಿಸಿ, ಏನೋ ದೊಡ್ಡದಾಗಿ ಸಿಗುತ್ತೆ, ಕೂಲ್ ಆಗುತ್ತೆ ಅಂತಾ ಬಂದರು, ಹಾಟ್ ಆಗಿ ಹೋದರು ಎಂದು ಬಿಜೆಪಿ ಮುಖಂಡ ರಾಮಚಂದ್ರ ಹೇಳಿದ್ದಾರೆ.
ಮೊಮ್ಮಕ್ಕಳ ಹುಟ್ಟುಹಬ್ಬಕ್ಕೆಂದು ಲಿಕ್ಕರ್ ತರಿಸಿದ್ದೆ. ಚುನಾವಣಾ ಮಟ್ಟದಲ್ಲಿ ಹುಟ್ಟುಹಬ್ಬ ಮಾಡಬಾರದು ಎಂದು ಸುಮ್ಮನಿದ್ದೆವು. ಈಗ ಅದನ್ನ ವಶಕ್ಕೆ ಪಡೆದಿದ್ದಾರೆ. ಬಿಜೆಪಿಗೆ ಲೀಡ್ ಬರುತ್ತೆ ಈ ಭಾಗದಲ್ಲಿ ಎಂದು ಅದನ್ನು ಸಹಿಸಲಾಗದೆ ಈ ರೀತಿ ಮಾಡಿದ್ದಾರೆ ಎಂದು ರಾಮಚಂದ್ರಪ್ಪ ಆರೋಪ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


