ಆಟವಾಡಲು ಹೋಗಿದ್ದ ಇಬ್ಬರು ಮಕ್ಕಳು 4 ಗಂಟೆಗಳ ಕಾಲ ನಾಪತ್ತೆ. ಪೋಷಕರು, ಸ್ಥಳೀಯರು ಎಲ್ಲರೂ ಹುಡುಕಿದ್ದಾರೆ. ಪತ್ತೆಯಾಗದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹುಡುಕಾಟ ನಡೆಸಿದಾಗ ಇಬ್ಬರ ಮಕ್ಕಳ ಮೃತದೇಹ ಕಾರಿನಲ್ಲಿ ಪತ್ತೆಯಾದ ಘಟನೆ ಮುಂಬೈನ ಅನೋಟ್ಪ್ ಹಿಲ್ ನಲ್ಲಿ ನಡೆದಿದೆ.
ಅ5 ವರ್ಷದ ಮುಸ್ಕಾನ್ ಮೊಹಬ್ಬತ್ ಶೇಕ್ ಹಾಗೂ 7 ವರ್ಷದ ಸಾಜಿದ್ ಮೊಹಮ್ಮದ್ ಶೇಕ್ ಎಂದು ಗುರುತಿಸಲಾಗಿದೆ. ವಿಶಾಲವಾದ ಪ್ರದೇಶದಲ್ಲಿ ಹಲವು ಗುಜುರಿ ಕಾರುಗಳು ಸೇರಿದಂತೆ ಹಲವರು ವಾಹನಗಳನ್ನು ಪಾರ್ಕಿಂಗ್ ಮಾಡುತ್ತಾರೆ. ಮೈದಾನದ ರೀತಿ ಪ್ರದೇಶವಾಗಿರುವ ಕಾರಣ ಬಹುತೇಕರು ಇದೇ ಜಾಗದಲ್ಲಿ ಪಾರ್ಕಿಂಗ್ ಮಾಡುತ್ತಾರೆ. ಆಟವಾಡುತ್ತಿದ್ದ ಮಕ್ಕಳು, ಕಾರಿನ ಡೋರ್ ಹಿಡಿದು ಎಳೆದಾಗ ತೆರೆದುಕೊಂಡಿದೆ. ಕಾರಿನ ಡೋರ್ ತೆರೆದುಕೊಂಡ ಕಾರಣ ಇಬ್ಬರು ಮಕ್ಕಳು ಕಾರಿನೊಳಗೆ ಕುಳಿತು ಆಡವಾಡಿದ್ದಾರೆ. ಕೆಲ ಹೊತ್ತು ಆಡವಾಡಿದ ಬಳಿಕ ಕಾರಿನ ಡೋರ್ ನ್ನು ಹಾಕಿ ಆಡಲು ಆರಂಭಿಸಿದ್ದಾರೆ. ಇತ್ತ ಸಂಜೆಯಾದರೂ ಮಕ್ಕಳು ಮನೆಗೆ ಬರಲಿಲ್ಲ. ಹೀಗಾಗಿ ಆತಂಕಗೊಂಡ ಪೋಷಕರು ಹುಡುಕಾಟ ನಡೆಸಿದ್ದಾರೆ.
ಸ್ಥಳೀಯರು ಕೂಡ ಹುಡುಕಾಟ ನಡೆಸಿದ್ದಾರೆ. ಪೊಲೀಸರಿಗೆ ದೂರಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಆಡವಾಡುತ್ತಿದ್ದ ಮಕ್ಕಳು ಕಾರಿನೊಳಗೆ ಕುಳಿತು ಆಟವಾಡಿದ್ದಾರೆ. ಕಾರಿನ ಡೋರ್ ಹಾಕಿಕೊಂಡು ಆಟವಾಡಿದ್ದಾರೆ. ಆದರೆ ಡೋರ್ ಹಾಕಿದ ಕಾರಣ ಕಾರಿನೊಳಗೆ ಗಾಳಿ ಕೊರತೆಯಾಗಿದೆ. ಇತ್ತ ಮಕ್ಕಳಿಗೆ ಕಾರಿನ ಡೋರ್ ತೆರೆಯಲು ಸಾಧ್ಯವಾಗಲಿಲ್ಲ. ಆಮ್ಲಜನಕ ಕೊರತೆಯಿಂದ ಅಸ್ವಸ್ಥಗೊಂಡ ಮಕ್ಕಳು ಹೊರಬರಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರು ಪಾರ್ಕಿಂಗ್ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


