ಪಾವಗಡ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಟಿ.ಎನ್. ಬೆಟ್ಟದ ನವ ದಂಪತಿ ಲಕ್ಷ್ಮೀ ಪತಿ ಪಿ.ಹೆಚ್. ಮತ್ತು ನವ್ಯಶ್ರೀ ಇಂದು ಹಸೆಮಣೆ ತುಳಿದು ನವ ಸಂಸಾರಕ್ಕೆ ಕಾಲಿಟ್ಟರು. ಮತದಾನವೂ ಇಂದೇ ಇರುವುದರಿಂದ, ಇದು ನಮ್ಮ ಹಕ್ಕು ನಮ್ಮ ಕರ್ತವ್ಯ. ಯಾರೂ ಕೂಡ ಮತದಾನದಿಂದ ದೂರ ಉಳಿಯದಿರಿ. ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡಿ ಎಂದು ಸಂದೇಶ ರವಾನಿಸಿದರು.
ಪ್ರಜಾಪ್ರಭುತ್ವದ ಭದ್ರ ಬುನಾದಿ ಈ ಮತದಾನ ಅಂತಹ ಮತದಾನದ ಮೌಲ್ಯ ಅರಿತ ಈ ನವ ದಂಪತಿಗಳ ಕಾರ್ಯ ಕಂಡ ನೆಟ್ಟಿಗರು, ಚುನಾವಣಾ ಅಧಿಕಾರಿಗಳು ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೀವನದ ಮುಖ್ಯ ಘಟ್ಟ ತಲುಪಿದ ನವ ದಂಪತಿಗಳಾದ ಲಕ್ಷ್ಮೀಪತಿ ಹಾಗೂ ನವ್ಯಶ್ರೀ ಅವರಿಗೆ ಬದುಕಲ್ಲಿ ಭಗವಂತ ಒಳಿತು ಮಾಡಲಿ.. ಒಬ್ಬೊಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕುವ ಶಕ್ತಿ ತಾಳ್ಮೆ ಕರುಣಿಸಲಿ ಎಂದು ಹಾರೈಸೋಣ.
ವರದಿ: ನಂದೀಶ್ ನಾಯ್ಕ ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


