ತಿಪಟೂರು: ನೊಣವಿನಕೆರೆ ಹೋಬಳಿಯ ಬಜಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಳ್ಳೇಕೆರೆ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಡಾ.ಎನ್.ಮೂರ್ತಿ ಸ್ಥಾಪಿತ ಸಂಘಟನೆಯನ್ನು ಬಳ್ಳೇಕೆರೆ ಗ್ರಾಮದಲ್ಲಿ ಇಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ ಯವರು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಅಶೋಕ್ ಗೌಡನಕಟ್ಟೆ ಮಾತನಾಡಿ, ಡಾ.ಎನ್.ಮೂರ್ತಿ ಬಣ. ಬಳ್ಳೇಕೆರೆ ಗ್ರಾಮದಲ್ಲಿ ಗ್ರಾಮ ಶಾಖೆ ಉದ್ಘಾಟನೆ ಮಾಡಿದ್ದು ತುಂಬಾ ಸಂತೋಷದ ವಿಷಯ, ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆಯಿಂದ ಹಿಡಿದು ಹಲವಾರು ಕಾನೂನುಗಳ ರಚನೆಯ ಮೂಲಕ ಭಾರತದ ಮೊದಲ ಕಾನೂನು ಮಂತ್ರಿಯಾಗಿ ಅವರು ನೀಡಿದ ಕೊಡುಗೆಗಳು ಸಾಮಾಜಿಕ ವ್ಯವಸ್ಥೆಯ ವಿರುದ್ಧ ಮಾಡಿದ ಹೋರಾಟ ಅವರ ವಿದ್ಯೆಯಲ್ಲಿ ಅವಿತುಕೊಂಡ ಸಾಧನೆಗಳು. ನಮ್ಮವರೆಲ್ಲರಿಗೂ ತಿಳಿದು ಬರುತ್ತಿದೆ. ಹಾಗೆಯೇ ನಮ್ಮ ಎಲ್ಲ ಯುವಕರು ಪ್ರಜ್ಞಾವಂತರಾಗಿ ಸಂಘಟಿತರಾಗಿ ಶಿಕ್ಷಣ ಪಡೆದು ಹೋರಾಟದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ತಿಳಿಸಿದರು
ತಾಲೂಕು ಉಪಾಧ್ಯಕ್ಷರಾದ ಮತ್ತಿಘಟ್ಟ ಶಿವಕುಮಾರ್ ಮಾತನಾಡಿ, ಸಮುದಾಯದ ಏಳಿಗೆಗೆ ಮತ್ತು ತಳ ಸಮುದಾಯದ ಬದುಕಿನ ಜೀವನ ಮಟ್ಟ ಸುಧಾರಿಸಲು ಹಗಲಿರುಳು ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದಾರೆ. ಮತ್ತು ನಮ್ಮ ತಾಲೂಕಿನಲ್ಲಿ ಗ್ರಾಮ ಶಾಖೆ ಉದ್ಘಾಟನೆ ಮಾಡಿದ ಬಳ್ಳೆಕೆರೆ ಗ್ರಾಮದ ಎಲ್ಲಾ ನನ್ನ ಪದಾಧಿಕಾರಿಗಳಿಗೆ ವಂದನೆಗಳು, ನೀವೆಲ್ಲರೂ ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ. ಕಾರ್ಮಿಕ ಘಟಕದ ಅಧ್ಯಕ್ಷ ಹೊನ್ನಪ್ಪ ವಿಭಾಗಿಯ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್. ತಾಲೂಕು ಕಾರ್ಯದರ್ಶಿ ರಾಜು. ಯುವ ಘಟಕ ತಾಲೂಕು ಅಧ್ಯಕ್ಷ ಗುರುಗದಹಳ್ಳಿ ಮಂಜುನಾಥ್. ಹೋಬಳಿ ಅಧ್ಯಕ್ಷ ಚಂದ್ರು ಗಂಗಣ್ಣ ಸೇರಿದಂತೆ ಪ್ರಮುಖ ಮುಖಂಡರುಗಳು ಹಾಜರಿದ್ದರು.
ವರದಿ: ಮಂಜು ಗುರುಗದಹಳ್ಳಿ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700