ಒಂದು ಕಾಲಕ್ಕೆ ಮಾತ್ರ ಸೀಮಿತವಾಗಿರುವ ಬೇಲದ ಹಣ್ಣು ಹಲವು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.
ಈ ಹಣ್ಣಿನಲ್ಲಿ ಹಲವಾರು ಔಷಧಿಗುಣಗಳು ಅಡಗಿವೆ. ಕಫ ನಿವಾರಣೆಗೆ ಬಾಯಿಂದ ಬರುವ ದುರ್ವಾಸನೆ ತಡಗಟ್ಟಲು ವಸಡುಗಳ ತೊಂದರೆ ಇದ್ದವರು ಹಾಗೂ ಆಮಶಂಕೆ ಭೇಧಿಯ ನಿವಾರಣೆಗೆ ಹಣ್ಣಾದ ಬೇಲದ ಹಣ್ಣಿನ್ನು ಬಳಸಬಹುದು. ಇದನ್ನು ಮೂಲವ್ಯಾಧಿ ಹಾಗೂ ಸಕ್ಕರೆ ಖಾಯಿಲೆಯವರು ಸಹ ಬಳಸಬಹುದು. ಈ ಬೇಲದ ಹಣ್ಣಿನ ಉಪಯೋಗಗಳನ್ನು ನೋಡೋಣ ಬನ್ನಿ…
ಬೇಲದ ಹಣ್ಣಿನ ರಸಕ್ಕೆ ಒಣಶುಂಠಿ ಪುಡಿ ಮತ್ತು ಬೆಲ್ಲ ಸೇರಿಸಿ ಸೇವಿಸಿದರೆ ತಾಯಿಯ ಎದೆಹಾಲು ವೃದ್ಧಿಸುತ್ತದೆ. ಶರೀರವನ್ನು ತಂಪುಗೊಳಿಸಲು ಮತ್ತು ಬಾಯಿಯ ದುರ್ಗಂಧವನ್ನು ನಿವಾರಣೆ ಮಾಡಲು ಬೇಲದ ಹಣ್ಣಿನ ಪಾನಕವನ್ನು ಸೇವಿಸಬೇಕು.
ಬೇಲದ ಹಣ್ಣಿಗೆ ಸಮಪ್ರಮಾಣ ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ಕಫ ಕಡಿಮೆಯಾಗುತ್ತದೆ. ಆಮಶಂಕೆ ಭೇದಿಯಾಗುತ್ತಿದ್ದರೆ ಬೀಜಗಳನ್ನು ತೆಗೆದ ಬೇಲದ ಕಾಯಿಯ ತಿರುಳನ್ನು ನುಣ್ಣಗೆ ರುಬ್ಬಿ ಸೇವಿಸಿದರೆ ಭೇದಿ ನಿಲ್ಲುತ್ತದೆ.
ಬೇಲದ ಎಳೆಗಳ ರಸಕ್ಕೆ ಸೈನದವ ಉಪ್ಪು ಮತ್ತು ಬಿಸಿ ನೀರನ್ನು ಸೇರಿಸಿ ಸೇವಿಸಿದರೆ ಅಸ್ತಮಾ ಕಡಿಮೆಯಾಗುತ್ತದೆ.
ಬಿಕ್ಕಳಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ ಬೇಲದ ಹಣ್ಣಿನ ರಸ ಮತ್ತು ನೆಲ್ಲಿಕಾಯಿ ರಸ ಸೇವಿಸಿ ದಿನಕ್ಕೆ 2 ಚಮಚ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA