ಹಾವೇರಿ: ನಾಳೆ ಗದಗನಲ್ಲಿ ಪ್ರಿಯಾಂಕಾ ಗಾಂಧಿಯವರು ಪ್ರಚಾರ ಮಾಡುತ್ತಾರೆ ಎಂದು ಹಾವೇರಿಯಲ್ಲಿ ಸಚಿವ ಹೆಚ್.ಕೆ. ಪಾಟೀಲ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಭರ್ಜರಿಯಾಗಿ ನಡೆದಿದೆ. ಗ್ಯಾರಂಟಿ ಕಾಡ್೯ಗಳನ್ನ ಮನೆ ಮನೆಗೆ ತಲುಪಿಸಿದ್ದೇವೆ ಎಂದು ಹೇಳಿದರು.
ಗೃಹಲಕ್ಷ್ಮೀ ಕಾರ್ಯಕ್ರಮಕ್ಕೆ ವಿಶೇಷವಾಗಿ ಪ್ರೇರಣೆ ನೀಡಿದವರು ಪ್ರೀಯಾಂಕಗಾಂಧಿ, ಅಮಿತ್ ಶಾ ಹೇಳುತ್ತಾರೆ ಕರ್ನಾಟಕದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲಾ ಅಂತ, ಪ್ರಜ್ವಲ್ ಪ್ರಕರಣದಲ್ಲಿ ಚಕಾರ ಎತ್ತದ ಮೋದಿ, ಅಮಿತ್ ಶಾ ಮಹಿಳೆಯರ ಬಗ್ಗೆ ಮಾತನಾಡ್ತಾರೆ, ಇವರಿಗೆ ಯಾವ ನೈತಿಕತೆ ಅವರಿಗೆ ಉಳಿದಿದೆ ಎಂದು ಪ್ರಶ್ನಿಸಿದರು.
ಮೋದಿಯವರ ಭಾಷೆ ಪ್ರಧಾನಮಂತ್ರಿಗೆ ಶೋಭೆ ತರಲ್ಲ, ಮೋದಿಯವರ ಆಲೋಚನೆ ದೇಶಕ್ಕೆ ಗಂಡಾಂತರ. ತಾಳಿ ಕಿತ್ತುಕೊಳ್ಳುವುದು ಅಲ್ಲ, ತಾಳಿ ಕೊಡುವ ಪಕ್ಷ ನಮ್ಮದು, ದೇಶಕ್ಕಾಗಿ ತಾಳಿ ತ್ಯಾಗ ಮಾಡಿದ್ದು ಸೋನಿಯಾ ಗಾಂಧಿ ಎಂದು ತಿರುಗೇಟು ನೀಡಿದರು.
ಬಿಜೆಪಿಯವರು ಗ್ಯಾರಂಟಿ ಗಳನ್ನ ಟೀಕೆ ಮಾಡ್ತಾರೆ, ಅಚ್ಚೆ ದಿನ್ ಬಂದಿದೆ ಅಂತಾ ಯಾರಿಗಾದರು ಅನಿಸಿದೆನಾ? ಅಭಿವೃದ್ಧಿ ಹೊಂದುತ್ತಿರುವ ಕರ್ನಾಟಕ ರಾಜ್ಯಕ್ಕೆ ಕುತ್ತಿಗೆ ಹಿಚುಕುವ ಕೆಲಸ ಮಾಡುತ್ತಿದ್ದಾರೆ. ಕಪಾಳಮೋಕ್ಷ ಮಾಡಿಕೊಂಡು ಬರ ಪರಿಹಾರ ಬಿಡುಗಡೆ ಮಾಡಿದರು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


