ನವದೆಹಲಿ: ನರೇಂದ್ರ ಮೋದಿಯವರ ಸುಳ್ಳು ಪ್ರಚಾರದಿಂದ ವಿಚಲಿತರಾಗಬೇಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ದೇಶದ ಶಕ್ತಿ ದೇಶದ ಯುವಕರು, ನರೇಂದ್ರ ಮೋದಿ ಅವರಿಂದ ಚುನಾವಣೆ ತಪ್ಪುತ್ತಿದೆ. ಅವರು ಮುಂದಿನ ಹಿಂದೂಸ್ತಾನದ ಪ್ರಧಾನ ಮಂತ್ರಿ ಅಗಲು ಸಾಧ್ಯವಿಲ್ಲ ಎಂದು ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ.
4, 5 ದಿನಗಳಲ್ಲಿ ನಿಮ್ಮ ಯೋಚನೆಯನ್ನು ಬದಲಾಯಿಸಲು ಯಾವುದಾದರೂ ಡ್ರಾಮ ಮಾಡುತ್ತಾರೆ. ಆದರೆ ನರೇಂದ್ರ ಮೋದಿಯವರ ಸುಳ್ಳು ಪ್ರಚಾರದಿಂದ ವಿಚಲಿತರಾಗಬೇಡಿ. 2 ಕೋಟಿ ಯುವಕರಿಗೆ ರೋಜಗಾರ್ ಯೋಜನೆಯನ್ನು ನೀಡುತ್ತೇವೆ ಎಂದು ಸುಳ್ಳು ಹೇಳಿದ್ದಾರೆ. ನೋಟ್ ಬ್ಯಾನ್ ಮಾಡಿದ್ದರು. ಆದರೆ ಈ ಎಲ್ಲಾ ಕೆಲಸವನ್ನು ಅದಾನಿಗಾಗಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ಜೂನ್ 4 ರಂದು ಇಂಡಿಯಾ ಘಟಬಂಧನದ ಸರ್ಕಾರ ರಚನೆಯಾಗಲಿದೆ. ಆಗಸ್ಟ್ 15ರೊಳಗೆ 30 ಲಕ್ಷ ಭರ್ತಿ ಭರೋಸಾ ಸರ್ಕಾರಿ ಹುದ್ದೆಗಳ ನೇಮಕಾತಿ ಕಾರ್ಯ ಆರಂಭಿಸುತ್ತೇವೆ ಎಂಬುದು ನಮ್ಮ ಗ್ಯಾರಂಟಿ ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296