ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಅಯೋಧ್ಯೆಗೆ ತೆರಳಿ ಅಯೋಧ್ಯಾಪತಿ ಶ್ರೀರಾಮನಿಗೆ ಮಂಡಿಯೂರಿ ನಮಿಸಿದ್ದಾರೆ. ಈ ಕುರಿತ ಫೋಟೋಗಳು, ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿವೆ.
ಅಯೋಧ್ಯೆಗೆ ಭೇಟಿ ನೀಡಿ ಪ್ರಭು ಶ್ರೀರಾಮನಿಗೆ ವಂದಿಸಿದ ವಿಚಾರವನ್ನು ಸ್ವತಃ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರೇ ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಅವರು ಅಯೋಧ್ಯಾ ಶ್ರೀರಾಮ ಮಂದಿರವನ್ನು ‘ಶಾಂತಿಯ ಸ್ಥಳ’ ಎಂದು ಬಣ್ಣಿಸಿದ್ದಾರೆ. ಅಪ್ಲೋಡ್ ಮಾಡಿದ ವೀಡಿಯೋದಲ್ಲಿ ಅವರು ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಈ ಆ ವೀಡಿಯೋದಲ್ಲಿ ಅಯೋಧ್ಯೆಯ ರಾಮ್ ಲಲ್ಲಾ ವಿಗ್ರಹದ ಮುಂದೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ನಮಸ್ಕರಿಸುತ್ತಿರುವುದನ್ನು ಕಾಣಬಹುದು. ಅವರು ನಮಸ್ಕರಿಸಿದ ವೇಳೆ ಹಿನ್ನಲೆಯಲ್ಲಿ ‘ಜೈ ಶ್ರೀ ರಾಮ್’ ಘೋಷಣೆಗಳು ಕೇಳಿಬಂದಿದೆ.
ತಮ್ಮ ಅಯೋಧ್ಯೆಯ ಭೇಟಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ನಾನು ಅಯೋಧ್ಯೆಗೆ ಭೇಟಿ ನೀಡುತ್ತಲೇ ಇದ್ದೇನೆ. ಜನವರಿ ತಿಂಗಳಲ್ಲಿ ಪ್ರಾಣ ಪ್ರತಿಷ್ಠೆಗೂ ಮುನ್ನ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದೆ. ಇಲ್ಲಿಗೆ ಭೇಟಿ ನೀಡಿದ್ದು ನನಗೆ ಅಪಾರವಾದ ಶಾಂತಿಯನ್ನು ನೀಡುತ್ತದೆ. ಇದು ನಮಗೆ ಕೇವಲ ಸಂತೋಷದ ವಿಷಯವಲ್ಲ. ಬದಲಾಗಿ ಅಯೋಧ್ಯೆಗೆ ಬಂದು ಶ್ರೀರಾಮನನ್ನು ಪೂಜಿಸುತ್ತಿರುವುದು ಹೆಮ್ಮೆ’ ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


