ಬೆಲ್ಜಿಯಂನ ವೆಸ್ಟ್ ಫ್ಲಾಂಡರ್ಸ್ ಪ್ರಾಂತ್ಯದ ಅರಣ್ಯದಲ್ಲಿ 14 ವರ್ಷದ ಬಾಲಕಿಯ ಮೇಲೆ ಹತ್ತು ಮಂದಿ ಅಪ್ರಾಪ್ತರು ಕಾಡಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಅತ್ಯಾಚಾರ ಎಸಗಿದ ಎಲ್ಲಾ ಹತ್ತು ಆರೋಪಿಗಳು 11 ಮತ್ತು 16 ರ ನಡುವಿನ ವಯಸ್ಸಿನವರು ಎನ್ನಲಾಗಿದೆ.
ಕೊರ್ಟ್ರಿಜ್ಕ್ ನಗರದಲ್ಲಿ ಬಾಲಕಿ ತನ್ನ ಗೆಳೆಯನೊಂದಿಗೆ ಹೊರಗಡೆ ಹೋಗಿದ್ದಳು. ಅಲ್ಲಿ ಆತನ ಹಲವು ಸ್ನೇಹಿತರು ಕೂಡ ಬಂದಿದ್ದರು. ಏಪ್ರಿಲ್ 2 ರಿಂದ ಏಪ್ರಿಲ್ 6ರ ನಡುವೆ 10 ಮಂದಿ ಅಪ್ರಾಪ್ತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಓರ್ವ ಬಾಲಕನಿಗೆ 11 ವರ್ಷ ಆತ ತುಂಬಾ ಚಿಕ್ಕವನಾದ ಕಾರಣ ಹೆಚ್ಚಿನ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅವರೆಲ್ಲರನ್ನೂ ಗುರುತಿಸಿ ಬಂಧಿಸಲಾಗಿದೆ ಮತ್ತು ಬಾಲಾಪರಾಧಿ ನ್ಯಾಯಾಲಯವು ಕ್ರಮ ಕೈಗೊಂಡಿದೆ. ಬಾಲಕಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೂರು ವರ್ಷಗಳ ಹಿಂದೆ ಈಸ್ಟ್ ಫ್ಲಾಂಡರ್ಸ್‌ನ ಘೆಂಟ್ ನಲ್ಲಿ ಇದೇ ರೀತಿಯ ಪ್ರಕರಣವು ನಡೆದಿತ್ತು. ಬೆಲ್ಜಿಯಂ ಸರ್ಕಾರವು ಜೂನ್ 2021 ರಲ್ಲಿ ಬಾಲಾಪರಾಧ ಕಾನೂನನ್ನು ತಿದ್ದುಪಡಿ ಮಾಡಿತು, ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರಕ್ಕೆ ಶಿಕ್ಷೆಗೊಳಗಾದ 12 ವರ್ಷ ವಯಸ್ಸಿನ ಯುವಕರಿಗೆ ದೀರ್ಘಾವಧಿಯ ಬಂಧನವನ್ನು ಅನುಮತಿಸುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


