ಶಿಡ್ಲಘಟ್ಟ: ಆಹಾರ ಅರಸಿ ಗ್ರಾಮ ದತ್ತ ಬಂದಿದ್ದ ಜಿಂಕೆಯನ್ನು ಬೀದಿ ನಾಯಿಗಳು ಕಚ್ಚಿ ಸಾಯಿಸಿವೆ. ತಾಲೂಕಿನ ಗಾಂಡ್ಲಚಿಂತೆ ಗ್ರಾಮದಲ್ಲಿ ಘಟನೆ ನಡೆದಿದ್ದು, ತಾಲ್ಲೂಕು ವಲಯ ಅರಣ್ಯಾಧಿಕಾರಿ ಸುಧಾಕರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ. ಗುಂಪಾಗಿ ದಾಳಿ ನಡೆಸಿರುವ ಬೀದಿ ನಾಯಿಗಳ ದಾಳಿಗೆ ತುತ್ತಾಗಿರುವ ಜಿಂಕೆ ರಕ್ತ ಸ್ರಾವದಲ್ಲಿ ನರಳುತ್ತಿರುವುದನ್ನು ಕಂಡು ಗ್ರಾಮಸ್ಥರು ಬೀದಿ ನಾಯಿಗಳನ್ನು ಚದುರಿಸಿದ್ದಾರೆ.
ಚಿಕಿತ್ಸೆಗಾಗಿ ದಿಬ್ಬೂರಹಳ್ಳಿಯ ಪಶು ಚಿಕಿತ್ಸಾಲಯಕ್ಕೆ ರವಾನಿಸಿದರು ಫಲಕಾರಿಯಾಗದೆ ಜಿಂಕೆ ಪ್ರಾಣ ಕಳೆದುಕೊಂಡಿದೆ. ಗಾಂಡ್ಲ ಚಿಂತೆ ಹಾಗೂ ಸುತ್ತಮುತ್ತಲ ಗ್ರಾಮಗಳ ಹೊರವಲಯದ ಬೆಟ್ಟ ಗುಡ್ಡಗಳನ್ನು ಆವಾಸಸ್ಥಾನ ಮಾಡಿಕೊಂಡಿರುವ ಜಿಂಕೆಗಳು ಆಹಾರ ನೀರು ಅರಸಿ ಆಗಾಗ್ಗೆ ಗ್ರಾಮಗಳ ಕಡೆ ಬರುವುದುಂಟು. ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಜಯಚಂದ್ರ ಸಿಬ್ಬಂದಿಗಳಾದ ಸಂದೀಪ್ ಲೋಕೇಶ್ ನರಸಿಂಹಪ್ಪ ನಾಗರಾಜು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


