ತುಮಕೂರು: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ರಾತ್ರಿ ವೇಳೆ ಸುರಿಯುತ್ತಿರುವ ಮಳೆಯಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಕಲ್ಪತರುನಾಡಲ್ಲಿ ತಡರಾತ್ರಿ ಗಾಳಿ ಸಹಿತ ವರುಣನ ಅಬ್ಬರಕ್ಕೆ ಹೈ ಟೆನ್ಶನ್ ವೈರ್ ಕಡಿದು ಬಿದ್ದು, ಕೆಲಕಾಲ ಜನರಲ್ಲಿ ಗಾಬರಿ ಹುಟ್ಟಿಸಿತ್ತು. ನಂತರ ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಲಕ್ಲಿಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದಲ್ಲಿ ಹಾದುಹೋಗಿರುವ ವಿದ್ಯುತ್ ಲೈನ್ ಮನೆಗಳ ಮೇಲೆ ತುಂಡಾಗಿ ಬಿದ್ದಿದೆ. ವಿದ್ಯುತ್ ನಿಂತುಹೋಗಿತ್ತು. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ.
ತುಮಕೂರು ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ, ಮರಗಳು ಧರೆಗುರುಳಿದ್ದು, ಕಟ್ಟಡಗಳ ಮೇಲೆ ಹಾನಿ ಉಂಟು ಮಾಡಿವೆ. ತುಮಕೂರು ನಗರದ ಕುವೆಂಪು ನಗರದಲ್ಲಿ ಮನೆಯ ಮೇಲೆ ಬಿದ್ದ ತೆಂಗಿನ ಮರದಿಂದ ಕಟ್ಟಡದ ಒಂದು ಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಕುವೆಂಪು ನಗರದ ಫಸ್ಟ್ ಬ್ಲಾಕ್, 5 ನೇ ಮುಖ್ಯ ರಸ್ತೆಯಲ್ಲಿ ಇರುವ ನಿರಂಜನ ಎನ್ನುವವರಿಗೆ ಸೇರಿದ ಮನೆ ಮೇಲೆ, ಕೃಷ್ಣಾ ನಾಯ್ಕ ಎನ್ನುವವರಿಗೆ ಸೇರಿದ ತೆಂಗಿನ ಮರ ಬಿದ್ದಿದೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


