ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ಭಾರತಕ್ಕೆ ಆಗಮಿಸುವುದನ್ನೇ ಪೊಲೀಸರು ಕಾದು ಕುಳಿತಿದ್ದಾರೆ.
ನಿನ್ನೆ ಮಧ್ಯಾಹ್ನ 12.20 ಕ್ಕೆ ಅಲ್ಲಿಂದ ವಿಮಾನವೊಂದರಿಂದ ಬೆಂಗಳೂರು ಬರಬೇಕಿತ್ತು, ಅವರು ಟಿಕೆಟ್ ತೆಗೆದುಕೊಂಡ ಬಗ್ಗೆ ನಗರದ ಪೊಲೀಸರಿಗೆ ಖಚಿತ ಮಾಹಿತಿ ಇತ್ತು. ಆದರೆ ಕೊನೆಕ್ಷಣದಲ್ಲಿ ಅವರು ಆ ವಿಮಾನ ಹತ್ತದೆ ಅಲ್ಲೇ ಉಳಿದುಬಿಟ್ಟಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಿ ಅವರು ಹೊರಬರುತ್ತಿದ್ದಂತೆಯೇ ದಸ್ತಗಿರಿ ಮಾಡಬೇಕೆಂದು ಕಾಯುತ್ತಿದ್ದ ಪೊಲೀಸರಿಗೆ ನಿರಾಶೆ ಎದುರಾಯಿತು. ಅವರು ವಾಪಸ್ಸು ಬರಲಿರುವ ಬಗ್ಗೆ ದಟ್ಟ ವದಂತಿಗಳು ಹರಡಿದ್ದು ಸುಳ್ಳಲ್ಲ. ಅವರು ಜರ್ಮನಿಯಲ್ಲಿರುವುದು ಖಚಿತವಾಗಿದೆ.
ಆದರೆ, ಇಂಟರ್ ಪೋಲ್ ಏನು ಮಾಡುತ್ತಿದೆ ಅನ್ನುವ ಪ್ರಶ್ನೆ ಉದ್ಭವಿಸುತ್ತದೆ. ರಾಜ್ಯ ಸರ್ಕಾರ ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಲಾಗಿದೆ ಎಂದು 10-12 ದಿನಗಳಿಂದ ಹೇಳುತ್ತಿದೆ. ಕುಖ್ಯಾತ ಅಪರಾಧಿಗಳನ್ನು ಕ್ಷಣಾರ್ಧದಲ್ಲಿ ಟ್ರೇಸ್ ಮಾಡಿ ವಶಕ್ಕೆ ಪಡೆಯುವ ಇಂಟರ್ ಪೋಲ್ ಅಧಿಕಾರಿಗಳಿಗೆ ಭಾರತದ ಒಬ್ಬ ಸಂಸದನನ್ನು ಹಿಡಿಯುವುದು ಕಷ್ಟವಾಗುತ್ತಿದೆಯೇ? ಎಂಬ ಅನುಮಾನ ಸಹಜವಾಗಿ ಮೂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


