ಬೆಂಗಳೂರು: ಐಪಿಎಲ್ 2024 ರಲ್ಲಿ ಆರ್ ಸಿಬಿ ಹಾಗೂ ಸಿಎಸ್ ಕೆ ವಿರುದ್ಧದ ಕಾಳಗ ವೀಕ್ಷಿಸಲು ಆರ್ ಸಿಬಿ ಮಹಿಳಾ ತಂಡದ ಆಟಗಾರ್ತಿಯರು ಮೈದಾನಕ್ಕೆ ಆಗಮಿಸಿದ್ದು, ವಿಶೇಷ ಆಕರ್ಷಣೆಯಾಗಿತ್ತು.
ಈ ವರ್ಷ ಡಬ್ಲ್ಯೂ ಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಮಹಿಳಾ ತಂಡ ಕಪ್ ಗೆದ್ದು ಬೀಗಿತ್ತು. ಅದರಂತೆ ಈ ಬಾರಿ ಪುರುಷರ ತಂಡ ಕೂಡ ಕಪ್ ಗೆಲ್ಲಲಿದೆ ಎನ್ನುವ ನಿರೀಕ್ಷೆ ಮೂಡಿದೆ. ತಮ್ಮ ಗೆಲುವಿನ ನಂತೆ ಇದೀಗ ಪುರುಷರ ತಂಡಕ್ಕೆ ಸ್ಪೂರ್ತಿ ತುಂಬಲು ಸ್ಮ್ರತಿ ಮಂಧನ ನೇತೃತ್ವದ ಆರ್ ಸಿಬಿ ಮಹಿಳೆಯರ ಪಡೆ ಚಿನ್ನಸ್ವಾಮಿ ಮೈದಾನಕ್ಕೆ ಆಗಮಿಸಿದರು.
ವಿಶೇಷವೆಂದರೆ ಇವರ ಜೊತೆಗೆ ಡೆಲ್ಲಿ ಮಹಿಳಾ ತಂಡದ ಜೆಮಿಮಾ ರೊಡ್ರಿಗಸ್ ಕೂಡಾ ಆರ್ ಸಿಬಿಗೆ ಚಿಯರ್ ಅಪ್ ಮಾಡಿದ್ದಾರೆ. ಈ ಫೋಟೋಗಳನ್ನು ಖುದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ ಸ್ಮ್ರತಿ ಮಂಧನ ಕನ್ನಡ ಭಾಷೆಯಲ್ಲಿರುವ ಆರ್ ಸಿಬಿ ಧ್ಯೇಯ ಗೀತೆಯನ್ನೂ ಪ್ರಕಟಿಸಿ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


