ನ್ಯಾಯಾಲಯದ ಆದೇಶದಂತೆ ಪತ್ನಿ ಹಾಗೂ ವಿಶೇಷಚೇತನ ಮಗುವಿನ ಜೀವನೋಪಾಯಕ್ಕೆ ನಿಯಮಿತವಾಗಿ ಜೀವನಾಂಶ ಪಾವತಿ ಮಾಡದ ಪತಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಹೈಕೋರ್ಟ್ ಆದೇಶಿಸಿದೆ.
ಸಾಮಾನ್ಯವಾಗಿ ನ್ಯಾಯಾಲಯಗಳು ಜೀವನಾಂಶ ಪಾವತಿಸುವಂತೆ ಆದೇಶ ನೀಡುತ್ತವೆ. ಪಾವತಿ ಮಾಡದಿದ್ದಲ್ಲಿ ದಂಡ ವಿಧಿಸಲಾಗುತ್ತದೆ. ಆದರೆ, ಈ ರೀತಿಯ ಜೀವನಾಂಶ ಪಾವತಿಸದ ಪತಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಿರುವುದು ಇದೇ ಮೊದಲು.
ಇನ್ನು ಮುಂದೆ ಕೌಟುಂಬಿಕ ವ್ಯಾಜ್ಯಗಳಲ್ಲಿ ತೊಡಗಿರುವವರು ಜೀವನಾಂಶ ಪಾವತಿಯಿಂದ ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲಾಗದು. ಹೈಕೋರ್ಟ್ ಆದೇಶದಿಂದಾಗಿ ಪತಿ, ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ 1,276 ಚದರ ಅಡಿ ಜಾಗದ ಆಸ್ತಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನು ಸಿವರಾಮನ್ ಮತ್ತು ಅನಂತ್ ರಾಮನಾಥ್ ಹೆಗಡೆ ಅವರಿದ್ದ ವಿಭಾಗೀಯ ಪೀಠ ಮಾಸಿಕ ಜೀವನಾಂಶವಾಗಿ ತಲಾ 5,000 ರೂ. ಪಾವತಿಸುವಂತೆ ಸೂಚನೆ ನೀಡಿದೆ.
ಪತಿಯ 1,276 ಚದರ ಅಡಿ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಪತ್ನಿಯು ಇತರೆ ಆಸ್ತಿ ವಿವರಗಳನ್ನು ಒದಗಿಸಿದರೆ, ಅದರಲ್ಲಿಯೂ ಭಾಗಿದಾರರಾಗಿರುತ್ತಾರೆ,” ಎಂದು ಪೀಠ ಹೇಳಿದೆ. ಅಲ್ಲದೆ, ಪತ್ನಿಹಾಗೂ ವಿಶೇಷಚೇತನ ಮಗುವಿನ ನಿರ್ವಹಣೆಗೆ ನೀಡುವ ಜೀವನಾಂಶವನ್ನು ತಲಾ 5,000ರೂ.ಗೆ ಹೆಚ್ಚಿಸಿತು.
“ಕೌಟುಂಬಿಕ ನ್ಯಾಯಾಲಯವು ವಿಧಿಸಿದ ಹೊಣೆಗಾರಿಕೆಯನ್ನು ಪತಿ ನಿರ್ವಹಿಸಿಲ್ಲ. ಆದ್ದರಿಂದ ಅರ್ಜಿದಾರರಿಗೆ(ಪತ್ನಿ ಮತ್ತು ಮಗ) ಪಾವತಿಯ ಆಸ್ತಿಯ ಮೇಲೆ ಭಾಗ ಪಡೆಯಬಹುದು.” ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಪ್ರಕರಣದ ವಿವರ: 2012ರಲ್ಲಿ ಪತಿಯ ಮನೆಯಿಂದ ಹೊರ ನಡೆದಿದ್ದ ಮಹಿಳೆ, ತನಗೆ ಮತ್ತು ಮಗನಿಗೆ ಜೀವನಾಂಶ ನೀಡುವಂತೆ ಕೋರಿದ್ದರು. ಆರಂಭದಲ್ಲಿ ಪತ್ನಿ ಮತ್ತು ಮಗನಿಗೆ ಕ್ರಮವಾಗಿ 2,000 ಮತ್ತು 1,000 ಮಾಸಿಕ ಜೀವನಾಂಶ ನಿಗದಿ ಮಾಡಲಾಗಿತ್ತು. ಇದಾದ ದಶಕದ ನಂತರ ಪತ್ನಿ ಮತ್ತು ಮಗ, ತಲಾ 3,000 ರೂ. ಗೆ ಹೆಚ್ಚಿಸಲು ಕೋರಿದರು. 2018ರ ಸೆಪ್ಟೆಂಬರ್ ನಲ್ಲಿ ಕೌಟುಂಬಿಕ ನ್ಯಾಯಾಲಯವು ತಲಾ 3,000 ರೂ. ಪಾವತಿಸುವಂತೆ ನಿರ್ದೇಶನ ನೀಡಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


