ಮಾಜಿ ಗೆಳತಿಯ ಮದುವೆ ಆರತಕ್ಷತೆಗೆ ಬಂದ ಯುವಕ ಮದುವೆ ಮಂಟಪದಲ್ಲಿಯೇ ವರನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ ಮತ್ತು ಕೈಯಿಂದ ಥಳಿಸಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಅದೇ ರೀತಿಯ ಸುದ್ದಿಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ತನ್ನ ಮಾಜಿ ಗೆಳತಿಯ ಮದುವೆ ಆರತಕ್ಷತೆಗೆ ಬಂದ ಯುವಕ ಮಂಟಪದಲ್ಲಿಯೇ ವರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಈ ಘಟನೆ ರಾಜಸ್ಥಾನ್ ಚಿತ್ತೋರ್ ಗಢ ಜಿಲ್ಲೆಯ ಭಿಲ್ವಾರದಲ್ಲಿ ನಡೆದಿದ್ದು, ವಧು ವರರಿಗೆ ವಿಶ್ ಮಾಡುವ ನೆಪದಲ್ಲಿ ಸ್ಟೇಜ್ ಹತ್ತಿದ ವಧುನಿನ ಮಾಜಿ ಪ್ರಿಯಕರ ವರನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಅದೃಷ್ಟವಶಾತ್ ವರನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಹಲ್ಲೆ ನಡೆಸಿರುವ ಆರೋಪಿ ಶಂಕರ್ ಲಾಲ್ ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ವಧು ಮತ್ತು ಶಂಕರ್ ಲಾಲ್ ಎರಡು ವರ್ಷಗಳ ಹಿಂದೆ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಇವರಿಬ್ಬರ ಮಧ್ಯೆ ಗೆಳೆತನ ಬೆಳೆದಿದೆ. ನಂತರ ಇವರಿಬ್ಬರ ನಡುವೆ ಬ್ರೇಕಪ್ ಆಗಿದ್ದು, ಇದೇ ಸೇಡಿನಿಂದ ಶಂಕರ್ ಲಲ್ ಮಾಜಿ ಗೆಳತಿಯ ಮದುವೆಗೆ ಬಂದು ವರನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ನಂತರ ಆತನನ್ನು ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


