ಬೆಂಗಳೂರು: ವಿಂಡ್ಸನ್ ಮ್ಯಾನರ್ ಜಂಕ್ಷನ್ ಬಳಿ ಕಾಮಗಾರಿ ಹಿನ್ನೆಲೆ ಏರ್ ರ್ಪೋರ್ಟ್ ರಸ್ತೆಯ ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್ ನಿಂದ ಪ್ಯಾಲೇಸ್ ಗುಟ್ಟಹಳ್ಳಿವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ರೈಲ್ವೆ ಇಲಾಖೆಯಿಂದ ಹೈಟ್ ಗೇಜ್ ಕಂಬಿ ಅಳವಡಿಕೆ ಸಲುವಾಗಿ ಇಂದು ರಾತ್ರಿ 11ರಿಂದ ನಾಳೆ ಬೆಳಗಿನ ಜಾವ 3ರವರೆಗೆ ಸಂಚಾರ ನಿರ್ಬಂಧ ಹೊರಡಿಸಲಾಗಿದ್ದು, ಪರ್ಯಾಯ ಮಾರ್ಗ ಬಳಸಲು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.
ಬಸವೇಶ್ವರ ಜಂಕ್ಷನ್ ನಿಂದ ಬಳ್ಳಾರಿ ರಸ್ತೆ ಕಡೆ ಹೋಗುವವರು ಬಸವೇಶ್ವರ ಜಂಕ್ಷನ್, ಓಲ್ಡ್ ಹೈ ಗ್ರೌಂಡ್ ಜಂಕ್ಷನ್, ಕಲ್ಪನಾ ಜಂಕ್ಷನ್, ಎಮ್ ಸಿಸಿ ಕಾಲೇಜು, ವಸಂತನಗರ ಕೆಳ ಸೇತುವೆ, ಚಕ್ರವರ್ತಿ ಲೇಔಟ್, ಬಿಡಿಎ ಅಂಡರ್ ಪಾಸ್, ಬಿಎಸ್ ರಾಜು ರಸ್ತೆ, ಜಟಕಾ ಸ್ಟ್ಯಾಂಡ್ ಮೂಲಕ ಬಳ್ಳಾರಿ ರಸ್ತೆ ಪ್ರವೇಶ ಮಾಡಬಹುದು. ಇನ್ನು ಬಸವೇಶ್ವರ ಜಂಕ್ಷನ್, ಕಲ್ಪನಾ ಜಂಕ್ಷನ್, ಚಂದ್ರಿಕಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ಅಂಡರ್ ಪಾಸ್, ಜಯಮಹಲ್ ರಸ್ತೆ, ಮೇಖ್ರಿ ಸರ್ಕಲ್ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬಸವೇಶ್ವರ ಜಂಕ್ಷನ್ ನಿಂದ ಬಳ್ಳಾರಿ ರಸ್ತೆಗೆ ಸಂಚರಿಸಲು ಮಹರಾಣಿ ಅಂಡರ್ ಪಾಸ್, ಮೈಸೂರ್ ಬ್ಯಾಂಕ್ ಸರ್ಕಲ್, ಉಪ್ಪಾರಪೇಟೆ ಠಾಣೆ ಸಿಗ್ನಲ್, ಶಾಂತಲಾ ಶಿಲ್ಕ್ಸ್ ಜಂಕ್ಷನ್, ರೈಲ್ವೇ ನಿಲ್ದಾಣ ರಸ್ತೆ, ಮಂತ್ರಿ ಮಾಲ್, ಸಂಪಿಗೆ ರಸ್ತೆ, ಸರ್ಕಲ್ ಮಾರಮ್ಮ, ಯಶವಂತಪುರ ಅಂಡರ್ ಪಾಸ್, ಸದಾಶಿವನಗರ ಪೊಲೀಸ್ ಠಾಣೆ, ಮೇಖ್ರಿ ಸರ್ಕಲ್ ಮೂಲಕ ಹೋಗಬಹುದು ಎಂದು ಹೇಳಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


