ತುಮಕೂರು: ಭೀಕರವಾಗಿ ಸಂಭವಿಸಿದ್ದ ಗ್ಯಾಸ್ ಸ್ಟವ್ ಸ್ಪೋಟ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ. ಕುಣಿಗಲ್ ಪಟ್ಟಣದ ಕೋಟೆ ನಿವಾಸಿಗಳಾದ ಕುಶಾಲ್ (11), ಶಿವಣ್ಣ (45) ಮೃತಪಟ್ಟವರು ಆಗಿದ್ದಾರೆ.
ರವಿಕುಮಾರ್ ಎಂಬುವರು ಕಾರ ಪುರಿ ವ್ಯಾಪಾರಿ ಮಾಡುತ್ತಿದ್ದರು. ಈ ವೇಳೆ ಪುರಿ ಹುರಿಯಲು ಹಾಗೂ ಅಡುಗೆ ಮಾಡಲು 4 ಕೆಜಿ ಗ್ಯಾಸ್ ಸ್ಟವ್ ಬಳಸುತ್ತಿದ್ದರು. 17 ತಾರೀಕಿನಂದು ರವಿಕುಮಾರ್ ಹೆಂಡತಿ ಶೃತಿಯವರು, ಮಗಳು ಹೇಮಲತಾಳನ್ನು ಟ್ಯೂಷನ್ ಗೆ ಬಿಡಲು, ಮನೆಯಿಂದ ಹೊರಗೆ ಬರುತ್ತಿದ್ದಂತೆ ಮನೆಯಲ್ಲಿ ಸ್ಫೋಟದ ಶಬ್ದ ಕೇಳಿ ಬಂದಿತ್ತು.
ಒಳಗೆ ಹೋಗಿ ನೋಡಿದಾಗ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿತ್ತು. ಈ ವೇಳೆ ಮನೆಯಲ್ಲಿ ಇದ್ದ ಕುಶಾಲ್, ಶೃತಿ, ಹೇಮಲತಾ, ಶಿವಣ್ಣ, ಮಂಜಮ್ಮ ಸಮೀನಾ ಗಾಯಗೊಂಡಿದ್ದರು.
ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕುಶಾಲ್ ಹಾಗೂ ಶಿವಣ್ಣ ಮೃತಪಟ್ಟಿದ್ದಾರೆ.
ಸಿಲಿಂಡರ್ ಸ್ಫೋಟದ ಶಬ್ದವನ್ನು ಕೇಳಿ ಪಕ್ಕದ ಮನೆಯವರಾದ ಶಿವಣ್ಣ ಗಾಯಾಳುಗಳ ರಕ್ಷಣೆಗೆ ಮುಂದಾಗಿದ್ದರು. ಈ ವೇಳೆ ಶಿವಣ್ಣ ಅವರಿಗೂ ಬೆಂಕಿದ ತಗುಲಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಮೃತಪಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


