ಬೆಂಗಳೂರು: ಮಳೆಯಿಂದ ನಗರದಲ್ಲಿ ಡೆಂಗ್ಯೂ/ಡೆಂಘಿ ಪ್ರಕರಣಗಳಲ್ಲಿ ವಿಪರೀತ ಏರಿಕೆ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ರಾಜಧಾನಿಯಲ್ಲಿ ಶೇ 40 ರಷ್ಟು ಡೆಂಘಿ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಇದರ ಜೊತೆಗೆ ಇತರ ಜ್ವರದ ಪ್ರಕರಣಗಳು ಕೂಡಾ ಹೆಚ್ಚಾಗಿದ್ದು, ಆರೋಗ್ಯ ಇಲಾಖೆಯ ಚಿಂತೆಗೆ ಕಾರಣವಾಗಿದೆ. ಈ ವರ್ಷ ಜನರು ಅತಿಯಾಗಿ ಎಳೆನೀರು ಸೇವಿಸಿ ಚಿಪ್ಪುಗಳನ್ನು ಎಲ್ಲೆಂದರಲ್ಲಿ ಎಸೆದಿದ್ದಾರೆ.
ಇದರಲ್ಲಿ ನೀರು ನಿಂತು ಅತಿಯಾಗಿ ಸೊಳ್ಳೆಗಳ ಉತ್ಪತಿಯಾಗುತ್ತಿದೆ. ಇದು ಈಗ ಆರೋಗ್ಯ ಇಲಾಖೆಯ ತಲೆ ಬಿಸಿಗೆ ಕಾರಣವಾಗಿದೆ. ಎಲ್ಲೆಂದರಲ್ಲಿ ಬಿಸಾಡಿರುವ ಎಳೆನೀರು ಚಿಪ್ಪುಗಳಲ್ಲಿ ಅತಿಯಾಗಿ ಸೊಳ್ಳೆಗಳ ಉತ್ಪತಿಯಾಗಿದೆ. ಇದರಿಂದಲೇ ಡೆಂಘಿ ಸೇರಿದ್ದಂತೆ ನಾನಾ ಖಾಯಿಲೆಗಳು ಏರಿಕೆಯಾಗುತ್ತಿವೆ ಎಂಬುದು ಆರೋಗ್ಯ ಇಲಾಖೆಯ ಅಭಿಪ್ರಾಯ.
ಎಳೆನೀರು ಕುಡಿದು ಬಿಸಾಡಿರುವ ಚಿಪ್ಪುಗಳನ್ನು ವಿಲೇವಾರಿ ಮಾಡುವುದೇ ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಡೆಂಘಿ ಜೊತೆಗೆ ವೈರಲ್ ಜ್ವರ ಕೂಡಾ ಹೆಚ್ಚೆಚ್ಚು ಕಂಡುಬರುತ್ತಿದೆ. ಇನ್ನು ರಾಜ್ಯದಲ್ಲಿ ಡೆಂಘಿ ಹೆಚ್ಚಳ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ. ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಡಿಸ್ ಸೊಳ್ಳೆ ನಾಶಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


