ತಿಪಟೂರು : ತಾಲ್ಲೂಕಿನ ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವಸದಸ್ಯರ ಮಹಾಸಭೆ ನಡೆಸಲಾಯಿತು. ಸಂಘದ ಆವರಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಸವರಾಜು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಂಘದ ಸದಸ್ಯರು ಹಾಗೂ ಶೇರುದಾರರ ಸಹಕಾರದಿಂದ ನಮ್ಮ ಸಹಕಾರ ಸಂಘ ಉತ್ತಮವಾಗಿ ನಡೆಯುತ್ತಿದೆ. ಸದಸ್ಯರು ಹಾಗೂ ಶೇರುದಾರರು ಪರಸ್ಪರ ಸಹಕಾರವೇ ನಮ್ಮ ಯಶಸ್ಸು. ಸಂಘದ ಬೆಳವಣಿಗೆಗೆ ಸದಸ್ಯರು ರೈತರು ಹಾಗೂ ಸಾರ್ವಜನಿಕರು ಹೆಚ್ಚುಹೆಚ್ಚು ವಹಿವಾಟು ನಡೆಸಿ ಸಂಘದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಪಿ ನಾಗರಾಜು ಸಂಘದ ಅಯವ್ಯಯ ಮಂಡಿಸಿದರು. ಸಭೆಯಲ್ಲಿ ನಿರ್ದೇಶಕರಾದ ಎಂ.ಬಿ.ಉಮಾಮಹೇಶ್, ರೇವಣ್ಣ, ಸೋಮಶೇಖರ್ ಹೆಚ್.ಪಿ., ಜಯಂತಿ, ಸಾವಿತ್ರಮ್ಮ, ಮೋಹನ್ ಕುಮಾರ್ ಆಡಳಿತಾದಿಕಾರಿ ಟಿ.ಪಿ.ಉಮಾಮಹೇಶ್ ಉಪಸ್ಥಿತರಿದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy