ಅತ್ಯಾಚಾರ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿ (SIT) ತನಿಖೆ ತೀವ್ರಗೊಳಿಸಿದೆ. ಪ್ರಕರಣದ ಎರಡನೇ ಆರೋಪಿ ಪ್ರಜ್ವಲ್ ಕೃತ್ಯ ಎಸಗಿದ ಸ್ಥಳದಲ್ಲಿ ಶೋಧ ನಡೆಸಿ, ಈ ವೇಳೆ ತನಿಖೆಗೆ ಅವಶ್ಯಕ ಎಂದು ಕೆಲವು ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬೆಂಗಳೂರಿನ ಬಸವನಗುಡಿಯಲ್ಲಿರುವ ಪ್ರಜ್ವಲ್ ಮನೆ ತಪಾಸಣೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಸಂಶಯಾಸ್ಪದ ಕಲೆಗಳುಳ್ಳ ಬೆಡ್‌ಶೀಟ್ ಪತ್ತೆಯಾಗಿದೆ. ವಶಪಡಿಸಿಕೊಂಡ ವಸ್ತುಗಳಲ್ಲಿ, ಡಬಲ್ ಕಾಟ್ ಹಾಸಿಗೆ ಮೇಲೆ ಅಲ್ಲಲ್ಲಿ ಇದ್ದ ಸಂಶಯಾಸ್ಪದ ಕಲೆಗಳನ್ನು ಹೊಂದಿದ್ದ ಬೆಡ್‌ಸ್ಪ್ರೆಡ್ ಕಂಡುಬಂದಿದೆ.
ಸಿಂಗಲ್ ಕಾಟ್ ಹಾಸಿಗೆ ಮೇಲೆಯೂ ಅಲ್ಲಲ್ಲಿ ಸಂಶಯಾಸ್ಪದ ಕಲೆಗಳನ್ನು ಹೊಂದಿದ್ದ ಮೇಲ್ವಾಸು ಕಂಡುಬಂದಿದೆ. ಜೊತೆಗೆ ಒಂದು ಗ್ರೇ ಕಲರ್ ಅದರ ಮೇಲೆ ಸಿಲ್ವರ್ ಕಲರ್ ಡಿಜೈನ್ ಉಳ್ಳ ವಾಲ್ ಪೇಪರ್ ತುಂಡು ದೊರೆತಿದೆ. ಸದ್ಯ ಎಸ್‌ಐಟಿ ಅಧಿಕಾರಿಗಳು ಈ ಸೊತ್ತುಗಳನ್ನ ವಶಪಡಿಸಿಕೊಂಡು ಜಪ್ತಿ ಮಾಡಿದ್ದಾರೆ. ಜಪ್ತಿಪಡಿಸಿದ ವಸ್ತುಗಳನ್ನು ತಜ್ಞರ ಪರೀಕ್ಷೆಗೆ ರವಾನಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


